ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಿಎಂ ಡಿ.ಕೆ. ಶಿವಕುಮಾರ್ ನಾಯಕತ್ವದ ಸಚಿವ ಸಂಪುಟ ವಿಸ್ತರಣೆಯ ಕಸರತ್ತಿಗೆ ಕೊನೆಗೂ ಅಂತಿಮ ತೆರೆ ಬಿದ್ದಿದೆ. ದೆಹಲಿಯಲ್ಲಿ ನಡೆದ ಸುದೀರ್ಘ ಸಭೆ-ಚರ್ಚೆಗಳ ಬಳಿಕ ಒಟ್ಟು 20 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಹೈಕಮಾಂಡ್ ಸಮ್ಮತಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಅವರು ಅಂತಿಮ ಪಟ್ಟಿಗೆ ಹಸಿರು ನಿಶಾನೆ ತೋರಿದ್ದಾರೆ. ನೂತನ ಸಚಿವರ ಪ್ರಮಾಣವಚನ ಸಮಾರಂಭ ಇಂದು ಸಂಜೆ 4 ಗಂಟೆಗೆ ರಾಜಭವನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿ ಇಲ್ಲಿದೆ:
- ಲಕ್ಷ್ಮಣ ಸವದಿ (ಅಥಣಿ)
- ಮಾಗಡಿ ಬಾಲಕೃಷ್ಣ (ಮಾಗಡಿ)
- ವಿಜಯಾನಂದ ಕಾಶಪ್ಪನವರ್ (ಹುನಗುಂದ)
- ಶಿವರಾಜ್ ತಂಗಡಗಿ (ಕನಕಗಿರಿ)
- ಎಸ್.ಎಸ್. ಮಲ್ಲಿಕಾರ್ಜುನ (ದಾವಣಗೆರೆ ಉತ್ತರ)
- ಸಿ. ಪುಟ್ಟರಂಗಶೆಟ್ಟಿ (ಚಾಮರಾಜನಗರ)
- ಸಂತೋಷ್ ಲಾಡ್ (ಕಲಘಟಗಿ)
- ಡಾ. ಅಜಯ್ ಸಿಂಗ್ (ಜೇವರ್ಗಿ)
- ಗಾಯತ್ರಿ ಶಾಂತೇಗೌಡ (ವಿಧಾನ ಪರಿಷತ್ ಸದಸ್ಯೆ)
- ರಿಜ್ವಾನ್ ಅರ್ಷದ್ (ಶಿವಾಜಿನಗರ)
- ಜಮೀರ್ ಅಹ್ಮದ್ ಖಾನ್ (ಚಾಮರಾಜಪೇಟೆ)
- ರುದ್ರಪ್ಪ ಲಮಾಣಿ
- ಕೆ.ಎಂ. ಶಿವಲಿಂಗೇಗೌಡ (ಅರಸೀಕೆರೆ)
- ಎನ್. ಚೆಲುವರಾಯಸ್ವಾಮಿ (ನಾಗಮಂಗಲ)
- ಬಸವರಾಜ ರಾಯರೆಡ್ಡಿ (ಯಲಬುರ್ಗಾ)
- ಟಿ. ರಘುಮೂರ್ತಿ (ಚಳ್ಳಕೆರೆ)
- ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ)
- ಮಂಕಾಳು ವೈದ್ಯ (ಭಟ್ಕಳ)
- ಕೆ.ಎಸ್. ಬಸವಂತಪ್ಪ (ಮಾಯಕೊಂಡ)
- ಮಧು ಬಂಗಾರಪ್ಪ (ಸೊರಬ)
ಸ್ಪೀಕರ್ ಹಾಗೂ ಪ್ರಮುಖ ಹುದ್ದೆಗಳ ವಿವರ:
- ಸಭಾಪತಿ (ವಿಧಾನಸಭೆ): ಜಿ.ಎಸ್. ಪಾಟೀಲ್
- ಉಪ ಸಭಾಪತಿ (ವಿಧಾನಸಭೆ): ಎ.ಎಸ್. ಪೊನ್ನಣ್ಣ
- ಸಭಾಪತಿ (ವಿಧಾನ ಪರಿಷತ್): ಸಲೀಂ ಅಹ್ಮದ್
- ಉಪ ಸಭಾಪತಿ (ವಿಧಾನ ಪರಿಷತ್): ಉಮಾಶ್ರೀ

