ಮೂಡಬಿದಿರೆ: ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳ, ಪರಮ ಪೂಜ್ಯ ಖಾವಂದರ ಶುಭಾಶೀರ್ವಾದದೊಂದಿಗೆ ಮೂಡಬಿದ್ರಿ ತಾಲೂಕು ಭಜನಾ ಪರಿಷತ್‌ನ ಶ್ರೀ ಕುಂಭ ಕಂಠಿಣಿ ಭಜನಾ ಮಂಡಳಿ ಅಚ್ಚರಕಟ್ಟೆ ಪಡುಮಾರ್ನಾಡ್ ಇದರ ಆಯೋಜನೆಯಲ್ಲಿ ತಾಲೂಕು ಮಟ್ಟದ 'ಭಜಕೆರೆ ಗೊಬ್ಬು-2026' ಮತ್ತು ಸಸಿ ವಿತರಣಾ ಸಮಾರಂಭವು ಇತ್ತೀಚೆಗೆ ವೈಭವದಿಂದ ಜರುಗಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಭಜನಾ ಪರಿಷತ್‌ನ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಾಧಕರಿಗೆ ಗೌರವ ಸನ್ಮಾನ:
ಸಭಾ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಜನಾ ಕಮ್ಮಟದಲ್ಲಿ ತರಬೇತಿ ಪಡೆದು, ತಾಲೂಕಿನಾದ್ಯಂತ ಹೆಸರುವಾಸಿಯಾಗಿರುವ ಪ್ರಮುಖ ಭಜನಾ ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲ್, ಗಣೇಶ್ ನೀರ್ಕೆರೆ, ವಿಜಯ್ ನೀರ್ಕೆರೆ ಹಾಗೂ ನಿವೃತ್ತ ಹಿರಿಯ ಆಶಾ ಕಾರ್ಯಕರ್ತೆ ಅನಸೂಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿರ್ತಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸೋಮನಾಥ್ ಕೋಟ್ಯಾನ್, ಮೂಲ್ಕಿ-ಮೂಡಬಿದ್ರಿ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಪ್ರಸಾದ್, ತೋಡಾರು ನವಚೇತನ ಬಳಗದ ಸಂಸ್ಥಾಪಕಾಧ್ಯಕ್ಷರಾದ ಸುಕೇಶ್ ಜಿ. ಅಂಚನ್, ಗುಮ್ಮಡಬೆಟ್ಟುವಿನ ಪಾಪಣ್ಣ ಪೂಜಾರಿ, ಹಿಂದುಳಿದ ವರ್ಗಗಳ ಪ್ರಭಾರಿ ಪ್ರಭಾಕರ್ ಕುಲಾಲ್, ಸಂಪತ್ ನೆತೋಡಿ ಹಾಗೂ ನಿಡ್ಡೋಡಿಯ ಪದ್ಮಶ್ರೀ ಭಟ್ ಉಪಸ್ಥಿತರಿದ್ದರು.
