ಕಾರ್ಮೋಡದ ಮರೆಯಲ್ಲಿ ಚಂದಿರನ ಹುಡುಕಾಟ.. ತಂಪೆರೆದ ಮಳೆಗೆ ಪ್ರಕೃತಿಯ ಸ್ವಾಗತ.. ವರುಣದೇವನ ಆರ್ಭಟಕೆ ನಾಚಿನೀರಾದಳು ಧರಣಿ.. ತುಂಬಿತುಳುಕಿವೆ ಗಂಗೆ,ತುಂಗೆ ಫಲ್ಗುಣಿ.. ಬಾಯ್ದಿಟ್ಟು ವಟಗುಡುತಿವೆ ಬಾವಿಯೊಳಗಿನ ಮಂಡೂಕಗಳು ಈಜಲಾಗದೆ ತೇಳುತಿದೆ ದಡದಲ್ಲಿ ಜಲಚರಗಳು..
ಅಬ್ಬರದ ಗುಡುಗಿಗೆ ಭೂಕಂಪನದ ಮಿಂಚು.. ವಾಯುದೇವನ ಹೊಡೆತಕ್ಕೆ ಹಾರಿಹೋಯಿತು ಹಂಚು..ಕಾನನದ ಒಳಗಡೆ ಅಡವಿದೇವಿಯ ಬೀಡು.. ಧರೆಗಿಳಿದ ಮಳೆಗೆ ತಂಪಾಯಿತು ಕರುನಾಡು.
✍️ರಚನೆ :ದೀಕ್ಷಿತ ರೈ

