ಬೆಳ್ತಂಗಡಿ: ಖಾಸಗಿ ವಾಹಿನಿಯ ವತಿಯಿಂದ ಆಯೋಜಿಸಲಾಗಿದ್ದ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ 'ಉತ್ತಮ ಶಾಸಕ' ಪ್ರಶಸ್ತಿಗೆ ಭಾಜನರಾದ ಬೆಳ್ತಂಗಡಿ ಶಾಸಕ ಶ್ರೀ ಹರೀಶ್ ಪೂಂಜ ಅವರನ್ನು ಶಿಶಿಲ ಸೀಮಾ ಚಿತ್ಪಾವನ ಸಂಘ ಹಾಗೂ ಅರಸಿನಮಕ್ಕಿ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.
ಶಾಸಕರ ನಿವಾಸ 'ಮಿಥಿಲಾ'ದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಶಾಸಕರನ್ನು ಭೇಟಿ ಮಾಡಿ, ಶಾಲು ಹೊದಿಸಿ ಶುಭ ಹಾರೈಸಿದರು.
ಕ್ಷೇತ್ರದ ಅಭಿವೃದ್ಧಿಗೆ ಹರೀಶ್ ಪೂಂಜ ಅವರು ನೀಡುತ್ತಿರುವ ಕೊಡುಗೆ ಹಾಗೂ ಶಾಸಕರಾಗಿ ಅವರ ಸಕ್ರಿಯ ಸೇವೆಯನ್ನು ಗುರುತಿಸಿ ಈ ಗೌರವ ಲಭಿಸಿರುವುದು ಹೆಮ್ಮೆಯ ವಿಚಾರ ಎಂದು ಸಂಘಟನೆಯ ಪ್ರಮುಖರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಿಶಿಲ ಸೀಮಾ ಚಿತ್ಪಾವನ ಸಂಘದ ಪದಾಧಿಕಾರಿಗಳು ಹಾಗೂ ಅರಸಿನಮಕ್ಕಿ ಬಿಜೆಪಿ ಗ್ರಾಮ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
