ದಕ್ಷಿಣ ಕನ್ನಡ

ಮೂಡಬಿದಿರೆ : 9ನೇ ಬಾರಿ ರಕ್ತದಾನ ಮಾಡಿ ಜೀವದಾತನಾದ ಅಶೋಕ್ ನಾಯ್ಕ್ ಕಳಸಬೈಲು ಮೂಡಬಿದಿರೆಯ ಸಮಾಜಸೇವಕನ ಮಾನವೀಯತೆಗೆ ಪ್ರಶಂಸೆ

In-Shot-20260910-200716272

 

ಮೂಡಬಿದಿರೆ:

ಯಾವುದೇ ಪರಿಚಯವಾಗಲಿ, ರಕ್ತಸಂಬಂಧವಾಗಲಿ ಇಲ್ಲದಿದ್ದರೂ ಕೇವಲ ಅಪರಿಚಿತ ವ್ಯಕ್ತಿಯ ಜೀವ ಉಳಿಸುವ ಏಕೈಕ ಉದ್ದೇಶದಿಂದ ತಕ್ಷಣವೇ ಸ್ಪಂದಿಸಿ ರಕ್ತದಾನ ಮಾಡುವ ಮೂಲಕ ಮೂಡಬಿದಿರೆಯ ಸಮಾಜಮುಖಿ ಚಿಂತಕ ಅಶೋಕ್ ನಾಯ್ಕ್ ಕಳಸಬೈಲು ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ.

​ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೇವಪ್ಪ ಎಂಬುವರಿಗೆ ತುರ್ತಾಗಿ 3 ಯೂನಿಟ್ ರಕ್ತದ ಅಗತ್ಯವಿತ್ತು. ಈ ಕುರಿತು ಸಾರ್ವಜನಿಕರಲ್ಲಿ ರಕ್ತದಾನಕ್ಕಾಗಿ ವಿನಂತಿ ಮಾಡಿಕೊಳ್ಳಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ತಡಮಾಡದೆ ಮೂಡಬಿದಿರೆಯಿಂದ ಆಸ್ಪತ್ರೆಗೆ ಧಾವಿಸಿದ ಅಶೋಕ್ ನಾಯ್ಕ್, ರಕ್ತದಾನ ಮಾಡುವ ಮೂಲಕ ಸಮಯಕ್ಕೆ ಸರಿಯಾಗಿ ನೆರವಾಗಿದ್ದಾರೆ.

​ಇದು 9ನೇ ಬಾರಿಯ ರಕ್ತದಾನ!

ಅಶೋಕ್ ನಾಯ್ಕ್ ಕಳಸಬೈಲು ಅವರು ರಕ್ತದಾನ ಮಾಡುತ್ತಿರುವುದು ಇದು ಮೊದಲೇನಲ್ಲ. ಇದುವರೆಗೆ 9 ಬಾರಿ ರಕ್ತದಾನ ಮಾಡುವ ಮೂಲಕ ಜೀವಕಾಳಜಿ ಮೆರೆದಿದ್ದಾರೆ. "ರಕ್ತಕ್ಕೆ ಯಾವುದೇ ಜಾತಿ, ಧರ್ಮ ಅಥವಾ ಸಂಬಂಧದ ಹಂಗಿಲ್ಲ. ಸಂಕಷ್ಟದಲ್ಲಿರುವ ವ್ಯಕ್ತಿಗೆ ಅಗತ್ಯವಿದ್ದಾಗ ನೆರವಾಗುವುದೇ ನಿಜವಾದ ಧರ್ಮ" ಎಂಬ ಆಶಯವನ್ನು ಅವರು ತಮ್ಮ ಕಾಯಕದ ಮೂಲಕ ತೋರಿಸಿಕೊಟ್ಟಿದ್ದಾರೆ.

​ಕಲಾಕ್ಷೇತ್ರದ ಜೊತೆಗೆ ಸಾಮಾಜಿಕ ಕಾಳಜಿ:

ತರಬೇತಿ ಹಾಗೂ ಭಜನಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅಶೋಕ್ ನಾಯ್ಕ್, ಈಗಾಗಲೇ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕಲಾ ಕ್ಷೇತ್ರದ ಜೊತೆಜೊತೆಗೆ ಸಾಮಾಜಿಕ ಸೇವೆಗಳಲ್ಲೂ ಮುಂಚೂಣಿಯಲ್ಲಿರುವ ಇವರ ಸೇವೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯು ಗೌರವಿಸಿ ಪ್ರಶಸ್ತಿ ನೀಡಿದೆ.

​ಮರಾಟಿ ರಕ್ತ ನಿಧಿ ಸಮಿತಿಯಿಂದ ಅಭಿನಂದನೆ:

ಆಪತ್ಕಾಲದಲ್ಲಿ ತುರ್ತಾಗಿ ಸ್ಪಂದಿಸಿ 9ನೇ ಬಾರಿ ರಕ್ತದಾನ ಮಾಡಿದ ಅಶೋಕ್ ನಾಯ್ಕ್ ಅವರ ಮಾನವೀಯ ಕಾರ್ಯವನ್ನು ಮರಾಟಿ ರಕ್ತ ನಿಧಿ ಸಮಿತಿ ಮುಕ್ತಕಂಠದಿಂದ ಶ್ಲಾಘಿಸಿದೆ. ಅವರ ಈ ಸಮಾಜಮುಖಿ ಸೇವೆ ನಿರಂತರವಾಗಿ ಮುಂದುವರಿಯಲಿ ಹಾಗೂ ಅವರ ಕಾರ್ಯಗಳು ಇತರರಿಗೂ ಪ್ರೇರಣೆಯಾಗಲಿ ಎಂದು ಸಮಿತಿಯ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.



image