ಕವನ

ರಕ್ಷಾಬಂಧನ



""ರಕ್ಷಾಬಂಧನ""


ಹಚ್ಚಹಸಿರಾದ ವನಸಿರಿಯ ನಡುವೆ ಗರಿಬಿಚ್ಚಿ ನಲಿವ ನವಿಲ ನರ್ತನ.... ಹಟ್ಟಿಯೊಳಗಿನ ಹಸಿದ ಗೋವಿನ ಆಕ್ರಂದನ.. ಒಡಹುಟ್ಟಿದ ಅನುಭಂದದ ಭಾಂದವ್ಯ ರಕ್ಷಾಬಂಧನ ..,

ಜೀವನವೆಂಬ ದೋಣಿಯ ಅಂಬಿಗನು ನೀನು ಸಾಗುತಿಹ ದಾರಿಯ ಪಾತ್ರದಾರಿ ನಾನು..., ಬದುಕೆಂಬುದು ನಾವಿಕ ನಿಲ್ಲದ ದೋಣಿಯಂತೆತೆ.., ರಕ್ಷೆ ಎಂಬುದು ಬಿಡಿಸಲಾಗದ ಬಂಧನವಂತೆ...,

ರಕ್ಷೆಯಲಿ ರಕ್ಷಕನಾಗಿ ನೀ ತೋರಿದೆ ಒಲವ ನಂಟು ಹಾಕಬೇಕು ಬಿಡಿಸಲಾಗದ ಗಂಟು...

ಜೀವನದ ಜಟಕಾಬಂಡಿಯಲಿ ಸಾಗುತಿಹ ಪಯಣ ಬದುಕೆಂಬ ರಣರಂಗದಲಿ ನಿಂತ ನಿಲ್ದಾಣ... ಎಲ್ಲೆಲ್ಲೂ ರಕ್ಷಾಬಂಧನದ ಪಥಸಂಚಲನ.




🖊️ರಚನೆ: ದೀಕ್ಷಿತ ರೈ



image