ಉಡುಪಿ: ಜಿಲ್ಲೆಯ ಪರ್ಕಳದಲ್ಲಿ ಭಾನುವಾರ (ನ.15) ಮುಂಜಾನೆಯ ವೇಳೆ ದನಗಳನ್ನು ಕಳವು ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಜಾನುವಾರುಗಳು ಜಪಾಪಿಸಿ ಅಪಾಯದಿಂದ ಪಾರಾಗಿವೆ.
ಕಾರಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಅಂಚುಹಾಕಿ ಕಳವು ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ವಾಹನದಿಂದ ಇಳಿದು ದನಗಳ ಸಮೀಪಕ್ಕೆ ಬರುತ್ತಿದ್ದವರನ್ನು ಗಮನಿಸಿದ ದನಗಳ ಹಿಂಡು ಬೆದರಿ ಏಕಾಏಕಿ ಅಲ್ಲಿಂದ ಓಡಿಹೋಗಿದೆ. ಪರಿಣಾಮವಾಗಿ ಜಾನುವಾರುಗಳು ಕಳ್ಳರ ಕೈಗೆ ಸಿಲುಕದೆ ಸುರಕ್ಷಿತವಾಗಿ ಬಚಾವ್ ಆಗಿವೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಜಾನುವಾರುಗಳು ಹೆದರಿ ಓಡಿಹೋದ ಬಳಿಕವೂ ಕೆಲಕಾಲ ಸ್ಥಳದಲ್ಲೇ ಕಾದಾಡಿದ್ದ ದುಷ್ಕರ್ಮಿಗಳು, ನಂತರ ತಮ್ಮ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಪೂರ್ಣ ಕೃತ್ಯದ ದೃಶ್ಯಾವಳಿಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.
ಮುಂಜಾನೆಯ ವೇಳೆಯೇ ಈ ರೀತಿಯ ಕಳ್ಳತನದ ಯತ್ನ ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಕೂಡಲೇ ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
