ಅರಸೀಕೆರೆ:ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ವಲಯದ ಚಗಚಗೆರೆ ಗ್ರಾಮದಲ್ಲಿ, ಜಯಲಕ್ಷ್ಮಮ್ಮ ಅವರಿಗೆ ಮಂಜೂರಾದ 'ವಾತ್ಸಲ್ಯ ಮನೆ'ಯ ನಿರ್ಮಾಣ ಕಾಮಗಾರಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಶುಭಾರಂಭದ ಸಮಾರಂಭದಲ್ಲಿ ಯೋಜನಾಧಿಕಾರಿಗಳಾದ ಶ್ರೀಮತಿ ಅಕ್ಷತಾ ರೈ, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ಈಶ್ವರಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜಣ್ಣ, ಹಾಗೂ ಪದಾಧಿಕಾರಿ ಗಂಗಮ್ಮ ಉಪಸ್ಥಿತರಿದ್ದರು.
ಅಲ್ಲದೆ, ವಲಯದ ಮೇಲ್ವಿಚಾರಕ ಸೀತಾರಾಮ್, ಮೇಸ್ತ್ರಿ ರವಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸಂಗೀತ, ಸೇವಾಪ್ರತಿನಿಧಿ ಶಶಿಕಲಾ, ಗ್ರಾಮದ ಪ್ರಮುಖ ಮುಖಂಡರು ಹಾಗೂ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
