ದಕ್ಷಿಣ ಕನ್ನಡ

ಮಂಗಳೂರು : ನಮ್ಮ ಕುಡ್ಲ ದ ಹಿರಿಯ ವೀಡಿಯೋಗ್ರಾಫರ್ ದಿವಾಕರ್ ಬೈಕಂಪಾಡಿಗೆ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಗರಿಮೆ



​ಮಂಗಳೂರು: ವೀಡಿಯೋಗ್ರಫಿ ಮತ್ತು ಛಾಯಾಗ್ರಹಣ ಕ್ಷೇತ್ರದ ದೀರ್ಘಕಾಲದ ಸಾಧನೆಯನ್ನು ಗುರುತಿಸಿ  ದಿವಾಕರ್ ಬೈಕಂಪಾಡಿ ಅವರಿಗೆ ಈ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿ ಲಭಿಸಿದೆ.

​ಕುಡ್ಲ ತಾಲೂಕಿನ ಬೈಕಂಪಾಡಿಯ ದಿ.ಗೋಪಾಲ ಪೂಜಾರಿ ಮತ್ತು ಶ್ರೀಮತಿ ಜಾನಕಿ ದಂಪತಿಗಳ ಪುತ್ರರಾದ ದಿವಾಕರ್ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಬೈಕಂಪಾಡಿಯ ಸರ್ಕಾರಿ ಶಾಲೆಗಳಲ್ಲೇ ಪೂರೈಸಿದರು.

​ಮಾಧ್ಯಮ ರಂಗದಲ್ಲಿ ಎರಡು ದಶಕಗಳಿಗೂ ಅಧಿಕ ಸೇವೆ

​ಮಂಗಳೂರಿನಲ್ಲಿ 1999ರಲ್ಲಿ ಹೊಸದಾಗಿ ಆರಂಭಗೊಂಡ 'ನಮ್ಮಕುಡ್ಲ' ತುಳು ಸುದ್ದಿ ವಾಹಿನಿಯಲ್ಲಿ ಮೊದಲ ಕ್ಯಾಮೆರಾಮನ್ ಆಗಿ ವೃತ್ತಿಜೀವನ ಆರಂಭಿಸಿದ ಅವರು, ಹರೀಶ್ಚಂದ್ರ ಪುತ್ತೂರು ರ ಅವರ ಮಾರ್ಗದರ್ಶನದಲ್ಲಿ ಸಂಕಲನ ದಲ್ಲೂ  ಪರಿನಿತರಾದರು ಗ್ರಾಮೀಣ ಸಮಸ್ಯೆಗಳ ವರದಿಗಾರಿಕೆ, ರಾಜಕೀಯ ವಿದ್ಯಮಾನಗಳು, ಖ್ಯಾತನಾಮರ ಸಂದರ್ಶನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಚಿತ್ರೀಕರಣದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡಿದ್ದಾರೆ.

​


ಕಳೆದ 27 ವರ್ಷಗಳಿಂದ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದೊಂದಿಗೆ ನೂರಾರು ಕಾರ್ಯಕ್ರಮಗಳ ನೇರ ಪ್ರಸಾರದಲ್ಲಿ ಅವರು ವೀಡಿಯೋಗ್ರಾಫರ್ ಆಗಿ ಸೇವೆ ಸಲ್ಲಿಸಿದ್ದಾರೆ.

 ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಗೂ ಪ್ರತಿ ವರ್ಷವೂ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಶ್ರೀ ಗುರು ಚಾರಿಟಬಲ್ ಟ್ರಸ್ಟ್'ನ ಸದಸ್ಯರು ಹಾಗೂ ಯುವವಾಹಿನಿ ಪಣಂಬೂರು ಕುಳಾಯಿ  ಘಟಕದ ಸದಸ್ಯರು ಹೌದು 


ಕರ್ನಾಟಕ ರಾಜೋತ್ಸವ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅವರು ದಿವಾಕರ್ ಬೈಕಂಪಾಡಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

 ಅಲ್ಲದೆ ನಮ್ಮಕುಡ್ಲ ವತಿಯಿಂದ ​ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಯೋಜಿಸಿದ ಗೂಡುದೀಪ ಪಂಥ ದ ಸಮಾರೋಪ ಕಾರ್ಯಕ್ರಮ ದಲ್ಲಿ ನಮ್ಮ ಕುಡ್ಲ ವತಿಯಿಂದ ಸನ್ಮಾನಿಸಲಾಯಿತು.

 


ಅಲ್ಲದೆ ಶ್ರೀ ಗುರುಚಾರಿಟೇಬಲ್( ರಿ ) ವತಿಯಿಂದ ವಿದ್ಯಾರ್ಥಿ ವೇತನ ವಿತರಣೆಯ ಸಂದರ್ಭದಲ್ಲಿ ಹಾಗೂ ಸುರತ್ಕಲ್‌ನ ರಂಗಜಾವಡಿ ಸಂಸ್ಥೆ ವತಿಯಿಂದ ದಿವಾಕರ್ ಇವರನ್ನು ಗೌರವಿಸಲಾಯಿತು ಮತ್ತು ತಮ್ಮ ಹೆಜಮಾಡಿ ತೆನ್ನಯಜಾರು ಕುಟುಂಬದ ಪರವಾಗಿ ಸನ್ಮಾನಿಸಲಾಯಿತು ಅಲ್ಲದೆ ಆಪಾರ ಬಂಧು ಮಿತ್ರರು ಹಾಗೂ ಸಂಘ ಸಂಸ್ಥೆಗಳು ದಿವಾಕರ್ ಬೈಕಂಪಾಡಿ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ