ದಕ್ಷಿಣ ಕನ್ನಡ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಮೃದ್ಧಿ ಪರಿವಾರದಿಂದ ಗೋ ದಾನ ಸಮರ್ಪಣೆ



ಧರ್ಮಸ್ಥಳ: ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಹಾಗೂ ನವೆಂಬರ್ 20ರಂದು ತೆರೆಕಾಣಲಿರುವ 'ಬೃಂದವಿಹಾರಿ' ಚಲನಚಿತ್ರದ ಯಶಸ್ಸನ್ನು ಕೋರಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹಸು ಹಾಗೂ ಕರುವನ್ನು ಗೋ ದಾನವಾಗಿ ಸಮರ್ಪಿಸಲಾಯಿತು.

​ಇದೇ ವೇಳೆ ಸಮೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ವಿ. ಸಮೃದ್ಧಿ ಮಂಜುನಾಥ್ ಹಾಗೂ ಅವರ ಕುಟುಂಬ ವರ್ಗದವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

​


ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ರಾಘವೇಂದ್ರ ಪೂಜಾರಿ, ಅಮರೇಶ್ ರಾವ್, ಹರೀಶ್ ಗೌಡ ಸೇರಿದಂತೆ ಸಮೃದ್ಧಿ ಪರಿವಾರದ ಪ್ರಮುಖರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಗೋ ಸಂರಕ್ಷಣೆ ಹಾಗೂ ಸಾಮಾಜಿಕ ಕಳಕಳಿಯ ಭಾಗವಾಗಿ ನಡೆದ ಈ ಗೋ ದಾನ ಕಾರ್ಯ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.