ಉಡುಪಿ ನ್ಯಾಯಾಲಯಕ್ಕೆ ಪದೇ ಪದೇ 3 ಬಾರಿ ಹುಸಿ ಬಾಂಬ್ ಬೆದರಿಕೆಯ ಹಿನ್ನಲೆಯಲ್ಲಿ ಇಂದು ಉಡುಪಿ ವಕೀಲರ ಸಂಘದ ಪ್ರತಿನಿಧಿ ಗಳು ನ್ಯಾಯಾಧೀಶರು,ವಕೀಲರು,ನ್ಯಾಯಾಲಯದ ಸಿಬ್ಬಂದಿ ಮತ್ತು ಕಕ್ಷಿದರರುಗಳ ಹಿತದೃಷ್ಟಿಯಿಂದ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಬೇಟಿ ನೀಡಿ ಪೊಲೀಸ್ ಉಪ ಅಧೀಕ್ಷಕರಿಗೆ ಆ ಬಗ್ಗೆ ಸೂಕ್ತ ರಕ್ಷಣೆ ಮತ್ತು ತನಿಖೆ ನಡೆಸಿ ನ್ಯಾಯಾಲಯಗಳಿಗೆ ಬಂದೋಬಸ್ತ್ ಒದಗಿಸುವಂತೆ ಮನವಿ ನೀಡಲಾಯಿತು…. ಬೇಡಿಕೆಗೆ ಸಕಾರತ್ಮಕ ವಾಗಿ ಸ್ಪಂದಿಸಿ ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ವಕೀಲರ ಸಂಘದ ಪ್ರಧಾನ ಚಂದ್ರಶೇಖರ್ ಶೆಟ್ಟಿ ವಕೀಲರುಗಳಾದ ವೈ ಟಿ ರಾಘವೇಂದ್ರ,ಅಖಿಲ ಬಿ ಹೆಗ್ಡೆ, ಗುರುರಾಜ್ ಜಿ ಎಸ್. , ಅನಿಲ್ ಪೂಜಾರಿ, ಕವಿತಾ, ನಾಗರಾಜ್ ಕೆ, ಬಾನುಮತಿ ನಾಯರಿ ಮತ್ತಿತರರು ಉಪಸ್ಥಿತರಿದ್ದರು.
