ಉಜಿರೆ : ನಿಶಾಂತ್ ರೆಂಜಾಳ ಹಾಗೂ ಅಭಿರಾಜ್ ಚಾರ್ಮಾಡಿ ಇವರ ಮಾಲೀಕತ್ವದಲ್ಲಿ ಮಲೆನಾಡಿನ ಸಾಂಪ್ರದಾಯಿಕ ಚಹಾ ರುಚಿ ಹಾಗೂ ಆತಿಥ್ಯವನ್ನು ಉಣಬಡಿಸುವ ‘ಮಲೆನಾಡು ಅಮೃತ ಚಹಾ’ ನೂತನ ಮಳಿಗೆಯು ನಿಡಿಗಲ್‌ನಲ್ಲಿ ಶನಿವಾರ (ಆಗಸ್ಟ್ 29) ಬೆಳಿಗ್ಗೆ 9 ಗಂಟೆಗೆ ಯಶಸ್ವಿಯಾಗಿ ಉದ್ಘಾಟನೆಗೊಂಡಿತು.
ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ರೆಟ್ಟಾಯ ಅವರು ದೀಪ ಬೆಳಗಿಸುವ ಮೂಲಕ ಮಳಿಗೆಯನ್ನು ಅಧಿಕೃತವಾಗಿ ಉದ್ಘಾಟಿಸಿ, ಸಂಸ್ಥೆಗೆ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಪ್ರಮುಖರು, ಬಂಧು-ಮಿತ್ರರು ಹಾಗೂ ಚಹಾ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೂತನ ರಸದೌತಣದ ಸವಿಯನ್ನು ಸವಿದರು. "ಮಲೆನಾಡು ಚಹಾ ಸಂಭ್ರಮ"ದೊಂದಿಗೆ ಹೊಸ ರುಚಿಯ ಅನುಭವ ನೀಡಲು ಮಳಿಗೆ ಈಗ ಸಾರ್ವಜನಿಕರ ಸೇವೆಗೆ ಲಭ್ಯವಿದೆ.


