ದಕ್ಷಿಣ ಕನ್ನಡ

ಬೆಳಾಲು: ಮೊಸರು ಕುಡಿಕೆ ಉತ್ಸವ ಸಮಾರೋಪ – ಕಡುಬಡ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವು ನೀಡಿದ ಡೈನಾ ಪ್ರವೀಣ್



ಬೆಳಾಲು: ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಲಾಗಿದ್ದ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭವು ಯುವಕ ಮಂಡಲದ ವಠಾರದಲ್ಲಿ ಭಾನುವಾರ (ಸೆಪ್ಟೆಂಬರ್ 6) ವಿಜೃಂಭಣೆಯಿಂದ ನೆರವೇರಿತು.

​ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಡೈನಾ ಪ್ರವೀಣ್ ವಿಜಯ್ ಪಾರಳ ಅವರು, ತಮ್ಮ ವೈಯಕ್ತಿಕ ವತಿಯಿಂದ ಬೆಳಾಲು ಗ್ರಾಮದ ಕಡುಬಡತನದಲ್ಲಿರುವ ಇಬ್ಬರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ಸಹಾಯವನ್ನು ಹಸ್ತಾಂತರಿಸಿ ಮಾನವೀಯತೆ ಮೆರೆದರು.

​


ಈ ಸಂದರ್ಭದಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಬಜಪೆ ವಲಯದ ಯೋಜನಾಧಿಕಾರಿ ಗಿರೀಶ್ ಎಂ., ಜುಬೈರ್ ಅನಂತೋಡಿ, ಮೈತ್ರಿ ಯುವಕ ಮಂಡಲದ ಅಧ್ಯಕ್ಷ ನವನೀತ್ ಗೌಡ, ಗೌರವ ಸಲಹೆಗಾರ ಹಾಗೂ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಜತ್ತನ್ನ ಗೌಡ, ಗೌರವಾಧ್ಯಕ್ಷ ನಿತಿನ್ ಮೋನಿಸ್ ಮತ್ತು ಕಾರ್ಯದರ್ಶಿ ಕಿರಣ್ ಸುವರ್ಣ ಸೇರಿದಂತೆ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



image