ದಕ್ಷಿಣ ಕನ್ನಡ

Belthangady: ಜೂನ್ 28 ರಂದು ಶ್ರಮಿಕ ಸೇವಾ ಟ್ರಸ್ಟ್‌ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ; 3 ಕೇಂದ್ರಗಳಲ್ಲಿ ಕಾರ್ಯಕ್ರಮ

 



ಬೆಳ್ತಂಗಡಿ: ತಾಲೂಕಿನ ಶ್ರೈಕ್ಷಣಿಕ ಸಾಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮಿಕ ಸೇವಾ ಟ್ರಸ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿ (ಡಿಸ್ಟಿಂಕ್ಷನ್) ಪಡೆದು ತೇರ್ಗಡೆಯಾದ ಬೆಳ್ತಂಗಡಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಿಸುವ “ಶ್ರಮಿಕ ಪ್ರತಿಭಾ ವಿದ್ಯಾರ್ಥಿ”ಸನ್ಮಾನ ಕಾರ್ಯಕ್ರಮವನ್ನು ಜೂನ್ 28ರ ಭಾನುವಾರ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿನ ಒಟ್ಟು ಮೂರು ಪ್ರಮುಖ ಕೇಂದ್ರಗಳಲ್ಲಿ ಈ ಭವ್ಯ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ವಿವರಗಳು ಈ ಕೆಳಗಿನಂತಿವೆ:
1. ಅಳದಂಗಡಿ ಕೇಂದ್ರ (ಬೆಳಗ್ಗೆ 9:00 ಗಂಟೆಗೆ)
ಸ್ಥಳ:ಸ್ವರಾಜ್ ಟವರ್ಸ್ ಸಭಾಭವನ, ಅಳದಂಗಡಿ.
ವ್ಯಾಪ್ತಿ: ಅಳದಂಗಡಿ ಮತ್ತು ನಾರಾವಿ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ.
ಒಳಗೊಳ್ಳುವ ಗ್ರಾಮಗಳು:ಬಡಗಕಾರಂದೂರು, ಪಿಲ್ಯ, ಸುಲ್ಕೇರಿಮೊಗ್ರು, ಸುಲ್ಕೇರಿ, ನಾವರ, ಕುದ್ಯಾಡಿ, ಬಳೆಂಜ, ನಾಲ್ಕೂರು, ತೆಂಕಕಾರಂದೂರು, ಗರ್ಡಾಡಿ, ಪಡಂಗಡಿ, ಕುಕ್ಕೇಡಿ, ನಿಟ್ಟಡೆ, ಮೇಲಂತಬೆಟ್ಟು, ಸವಣಾಲು, ಮುಂಡೂರು, ಶಿರ್ಲಾಲು, ಕರಂಬಾರು, ನಾರಾವಿ, ಕುತ್ಲೂರು, ಸಾವ್ಯ, ಅಂಡಿಂಜೆ, ಕೊಕ್ರಾಡಿ, ಕಾಶಿಪಟ್ನ, ಮರೋಡಿ, ಪೆರಾಡಿ, ಹೊಸಂಗಡಿ, ಬಡಕೋಡಿ, ಆರಂಬೋಡಿ, ಗುಂಡೂರಿ, ಬಜಿರೆ, ಕರಿಮಣೇಲು, ಮೂಡುಕೋಡಿ ಮತ್ತು ವೇಣೂರು.
2. ಲಾಯಿಲ ಕೇಂದ್ರ (ಬೆಳಗ್ಗೆ 11:30 ಗಂಟೆಗೆ)
ಸ್ಥಳ:ಸಂಗಮ ಸಭಾಭವನ, ಲಾಯಿಲ.
ವ್ಯಾಪ್ತಿ:ಕಣಿಯೂರು, ಕುವೆಟ್ಟು ಹಾಗೂ ಬೆಳ್ತಂಗಡಿ ನಗರ ಮಹಾಶಕ್ತಿಕೇಂದ್ರದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ.
ಒಳಗೊಳ್ಳುವ ಗ್ರಾಮಗಳು:ತಣ್ಣೀರುಪಂಥ, ಬಾರ್ಯ, ಕರಾಯ, ತೆಕ್ಕಾರು, ಪುತ್ತಿಲ, ಬಂದಾರು, ಉರುವಾಲು, ಕಣಿಯೂರು, ಮೊಗ್ರು, ಇಳಂತಿಲ, ಕಳಿಯ, ನ್ಯಾಯತರ್ಪು, ಮಚ್ಚಿನ, ಪಾರೆಂಕಿ, ಕುಕ್ಕಳ, ಓಡಿಲ್ನಾಳ, ಸೋಣಂದೂರು, ಮಾಲಾಡಿ, ಕುವೆಟ್ಟು, ಕೊಯ್ಯೂರು ಹಾಗೂ ಬೆಳ್ತಂಗಡಿ ನಗರ ಪ್ರದೇಶ.
3. ಉಜಿರೆ ಕೇಂದ್ರ (ಮಧ್ಯಾಹ್ನ 2:00 ಗಂಟೆಗೆ)
ಸ್ಥಳ: ಅನುಗ್ರಹ ಚರ್ಚ್ ಸಭಾಭವನ, ಉಜಿರೆ.
ವ್ಯಾಪ್ತಿ:ಉಜಿರೆ, ಲಾಯಿಲ ಹಾಗೂ ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ.
ಒಳಗೊಳ್ಳುವ ಗ್ರಾಮಗಳು:ಲಾಯಿಲ, ನಡ, ಕನ್ಯಾಡಿ, ನಾವೂರು, ಇಂದಬೆಟ್ಟು, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಮುಂಡಾಜೆ, ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ನೆರಿಯ, ಪುದುವೆಟ್ಟು, ಕಲ್ಮಂಜ, ಉಜಿರೆ, ಬೆಳಾಲು, ಧರ್ಮಸ್ಥಳ, ಪಟ್ರಮೆ, ಕಳೆಂಜ, ನಿಡ್ಲೆ, ಶಿಬಾಜೆ, ಶಿಶಿಲ, ರೆಖ್ಯಾ, ಹತ್ಯಡ್ಕ ಮತ್ತು ಕೊಕ್ಕಡ.

ಟ್ರಸ್ಟ್ ಮನವಿ:
> ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಗ್ರಾಮೀಣ ಹಾಗೂ ನಗರ ಭಾಗದ ಪ್ರತಿಭೆಗಳನ್ನು ಗುರುತಿಸಿ, ಅವರ ಮುಂದಿನ ಭವಿಷ್ಯಕ್ಕೆ ಸ್ಪೂರ್ತಿ ತುಂಬುವ ಆಶಯದೊಂದಿಗೆ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ನಿಗದಿಪಡಿಸಿದ ಆಯಾ ವ್ಯಾಪ್ತಿಯಲ್ಲಿ ಡಿಸ್ಟಿಂಕ್ಷನ್ ಅಂಕ ಗಳಿಸಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ತಪ್ಪದೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಶ್ರಮಿಕ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.