ದಕ್ಷಿಣ ಕನ್ನಡ

ಮಂಗಳೂರು : ಸಿ.ಟಿ. ರವಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ: ಮಂಗಳೂರಿನಲ್ಲಿ ಬಿಜೆಪಿ ಕಾನೂನು ಪ್ರಕೋಷ್ಟದಿಂದ ಸೈಬರ್ ದೂರು

 


ಮಂಗಳೂರು:ಬಿಜೆಪಿ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ (ಎಮ್‌ಎಲ್‌ಸಿ) ಸಿ.ಟಿ. ರವಿ ಅವರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಗೂ ಬರಹಗಳನ್ನು ಹರಿಬಿಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಕೋಷ್ಟದ ವತಿಯಿಂದ ಸಹಾಯಕ ಪೊಲೀಸ್ ಆಯುಕ್ತರಿಗೆ (ACP) ದೂರು ನೀಡಲಾಗಿದೆ.

​ಸಾಮಾಜಿಕ ಮಾಧ್ಯಮಗಳಲ್ಲಿ ಸಿ.ಟಿ. ರವಿ ಅವರ ಫೋಟೋಗಳನ್ನು ಎಡಿಟ್ ಮಾಡಿ, ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿರುವ ಕೆಲವು ನಿರ್ದಿಷ್ಟ ಖಾತೆಗಳ ವಿರುದ್ಧ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಸೈಬರ್ ಪೊಲೀಸರು ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.


ಪ್ರಮುಖ ಮುಖಂಡರು ಭೇಟಿ:

ದೂರು ನೀಡುವ ಸಂದರ್ಭದಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಕೋಷ್ಟದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

​ಶ್ರೀಧರ್ ಶೆಟ್ಟಿ ಪುಳಿಂಚ – ಜಿಲ್ಲಾ ಸಂಚಾಲಕರು

​ಪ್ರಮೋದ್ ಪೂಜಾರಿ ಕೆರ್ವಾಶೆ – ಸಹ ಸಂಚಾಲಕರು

​ವೇಣು ಕುಮಾರ್, ಶ್ರೀಧರ್ ಸುವರ್ಣ, ಕುಮಾರಿ ಅಕ್ಷತಾ – ಜಿಲ್ಲಾ ಸಮಿತಿ ಸದಸ್ಯರು

​ಬಾಲಕೃಷ್ಣ ಉಳ್ಳಾಲ ಬೈಲು – ಮಂಗಳೂರು ಮಂಡಲ ಸಂಚಾಲಕರು

​ಅಭಿಲಾಶ್ ಶಾಸ್ತ್ರಿ – ಸಹ ಸಂಚಾಲಕರು

​ಅಪಪ್ರಚಾರ ಮಾಡುವ ಸೈಬರ್ ಖಾತೆಗಳ ವಿರುದ್ಧ ಶೀಘ್ರವೇ ತನಿಖೆ ನಡೆಸಿ, ಶಿಸ್ತುಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.




image