ದಕ್ಷಿಣ ಕನ್ನಡ

ಮಂಗಳೂರು: ಧರ್ಮಸ್ಥಳ ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಸುದ್ದಿಗೋಷ್ಠಿ

 


ಮಂಗಳೂರು: ಧರ್ಮಸ್ಥಳ ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಸುದ್ದಿಗೋಷ್ಠಿ 

ವಿಧಾನ ಪರಿಷತ್ ಚುನಾವಣೆಯಲ್ಲಿ  ಲಿಂಗರಾಜು ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಅಭ್ಯರ್ಥಿ ಮಾಡಿದ್ದೆವು

ಅವರು ಮತಗಳನ್ನು ಪಡೆದು ಜಯಶೀಲ ಆಗಿದ್ದಾರೆ

ಚುನಾವಣಾ ಸಂಧರ್ಭದಲ್ಲಿ ನಡೆದ ಅಡ್ಡ ಮತದಾನ ನನ್ನನ್ನು ಸೇರಿದಂತೆ ರಾಜ್ಯದ ಕಾರ್ಯಕರ್ತ ರಿಗೆ ನೋವಾಗಿದೆ

ಬಿಜೆಪಿ ಶಾಸಕರಿಂದ ನಡೆದ ಅಡ್ಡ ಮತದಾನ ಬೇರೆ ಬೇರೆ ಚರ್ಚೆ ಗಳನ್ನು ಹುಟ್ಟು ಹಾಕಿದೆ

ಹೀಗಾಗಿ ಫಲಿತಾಂಶ ದ ಮಾರನೇ ದಿನ ಆಣೆ ಪ್ರಮಾಣ ,ಶಾಸಂಕಾಂಗ ಪಕ್ಷದ ಸಭೆ ಧರ್ಮಸ್ಥಳ ದಲ್ಲಿ ಆಗಬೇಕೇಂದು ಹೇಳಿದ್ದೆ

ನಾನೂ ಭಾವನಾತ್ಮಕ ವ್ಯಕ್ತಿ, ನನ್ನ ಮನಸ್ಸಿಗೆ ತೋಚಿದ್ದನ್ನು ಹೇಳಿದ್ದೇನೆ

ಪಕ್ಷದ ಹಿರಿಯರು ಧರ್ಮಸ್ಥಳ ದ ತನಕ ಹೋಗೋದು ಬೇಡ ಅಂತಾ ಹೇಳಿದ್ದರು



ನಾನು ದೇವರ ಪರಮ ಭಕ್ತನಾಗಿ ಈ ಕ್ಷೇತ್ರಕ್ಕೆ ಬಂದಿದ್ದೇನೆ 

ಸಾಕಷ್ಟು ಅಪಪ್ರಚಾರ ಅವತ್ತೂ ಇವತ್ತು ಆಗಿದೆ

ಅಡ್ಡ ಮತದಾನ ರಾಜ್ಯದ ಅಧ್ಯಕ್ಷ ವಿಜಯೇಂದ್ರ ಮತ್ತು ಸಿಎಂ ಡಿಕೆ ಶಿ ನಡುವೆ ವ್ಯವಹಾರಿಕ ಸಂಬಂಧ,ಆತ್ಮೀಯತೆಯ ಆರೋಪ ಮಾಡಿದ್ರು

ನಾನೇ ಅಡ್ಡ ಮತದಾನಕ್ಕೆ ಸಹಕಾರ ನೀಡಿದ್ದೇನೆ ಎಂಬ ಚರ್ಚೆಯನ್ನು ನಮ್ಮವರೇ ಮಾಡಿದ್ರು

ನಮ್ಮ ಪ್ರಧಾನ ಮಂತ್ರಿ ಮೋದಿ,ಅಮಿತ್ ಷಾ ಅವರ ಆಶೀರ್ವಾದ ದಿಂದ ರಾಜ್ಯಾಧ್ಯಕ್ಷ ಆಗಿದ್ದೇನೆ

ರಾಜ್ಯಾಧ್ಯಕ್ಷ ನಾಗಿ ಇಂತಹ ಕೀಳು ಮಟ್ಟದ ಯೋಚನೆ ಮಾಡೋದಿಲ್ಲ

ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಆತ್ಮೀಯತೆ,ವ್ಯವಹಾರಿಕ ಸಂಬಂಧ ಇಲ್ಲ

ಅಪಪ್ರಚಾರ ಮಾಡುವವರಿಗೆ ಭಗವಂತ ಒಳ್ಳೆಯದನ್ನು ಮಾಡಲಿ

ಮಂಗಳೂರು :ಧರ್ಮಸ್ಥಳ ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಸುದ್ದಿಗೋಷ್ಠಿ 

ನನಗೆ ವಿಶ್ವಾಸ ಇದೆ,ಪಕ್ಷದ ಸಂಘಟನೆ ಬಗ್ಗೆ ನಂಬಿಕೆ ಇದೆ

ಕಾರ್ಯಕರ್ತರ ಶಕ್ತಿ ಬಗ್ಗೆ ನನಗೆ ವಿಶ್ವಾಸ ಇದೆ

ರೈತರು,ಬಡವರು,ಯುವಕರ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತವಾಗಿ ಕಿತ್ತು ಹಾಕುವ ವಿಶ್ವಾಸ ಇದೆ

ಮೊನ್ನೆಯ ದಿನ ಸಾಕಷ್ಟು ಶಾಸಕರು ಕರೆ ಮಾಡಿದ್ರು

೨೦೧೮ ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇದ್ದಾಗ ೧೭ ಶಾಸಕರು ರಾಜೀನಾಮೆ ಕೊಟ್ಟು ಬಂದ್ರು

ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಪಕ್ಷ ಸೇರಿದ್ರು

ಯಡಿಯೂರಪ್ಪ ನೇತೃತ್ವದಲ್ಲಿ ಗೆದ್ದವರನ್ನು ಸೇರಿಸಿ ಒಳ್ಳೆಯ ಸರ್ಕಾರ ನೀಡಿದ್ರು

ಆದರೆ ಈಶ್ವರಪ್ಪ ಮರೆತಿರಬಹುದು

ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ೧೮ ಹಿಂದೂ ಕಾರ್ಯ ಕರ್ತರ ಹತ್ಯೆಯಾಗಿತ್ತು

ಕಾರ್ಯಕರ್ತರ ಮೇಲೆ‌ಕೇಸ್ ಹಾಕಿ ಕುಗ್ಗಿಸುವ ಕೆಲಸ ವಾಗಿತ್ತು

ಅಂತಹ ಸಂಧರ್ಭದಲ್ಲಿ ಆ ಶಾಸಕರು ಕೈ ಜೋಡಿಸಿದ ಕಾರಣಕ್ಕೆ ಒಳ್ಳೆಯ ಸರ್ಕಾರ ಕೊಡೋಕೆ ಕಾರಣವಾಯಿತು

ಈಶ್ವರಪ್ಪ ಕೂಡಾ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಎಂಜಾಯ್ ಮಾಡಿದ್ರು

ಆದರೆ ಈಶ್ವರಪ್ಪ ಅವರಿಗೆ ಎಲ್ಲವೂ ಮರೆತುಹೋಗಿದೆ

ಬಿಜೆಪಿ ಯ ೬೩ ಶಾಸಕರಿಗೆ ಒಂದು ಮಾತು ಹೇಳುತ್ತೇನೆ

ಕಾಂಗ್ರೆಸ್ ಬೇರೆ ಬೇರೆ ಹೆಸರನ್ನು ತೇಲಿ ಬಿಡುತ್ತಿದ್ದಾರೆ

ಇದ್ದರಿಂದ ಸ್ವಂತ ಕ್ಷೇತ್ರದ ಕಾರ್ಯಕರ್ತರೂ ಅನುಮಾನದಿಂದ‌ ನೋಡುವಂತಾಗಿದೆ

ಸತ್ಯ ಇಂದಲ್ಲ‌ ನಾಳೆ ಹೊರಗೆ ಬರುತ್ತದೆ

ಆದರೆ ವಿಜಯೇಂದ್ರ ಕೂಡಾ ಅಡ್ಡ ಮತದಾನಕ್ಕೆ ಸಹಕಾರ ನೀಡಿದ್ರೆ ನಾನೂ ಮಾಡಿದಂತಾಗುತ್ತದೆ

ಇವತ್ತಿಗೆ ಈ ಚರ್ಚೆಗೆ ಇತಿಶ್ರೀ ಹಾಡುತ್ತೇವೆ

ಮಂಗಳೂರು :ಗೌಪ್ಯ ಮತದಾನ ಆದರೂ ಸತ್ಯ ಗೊತ್ತಾಗುತ್ತೆ 

ಕೇಂದ್ರದಲ್ಲಿ ನಮ್ಮದೇ ಸರಕಾರ ಇದೆ . ವರಿಷ್ಠರು ಇದನ್ನ ಗಂಭೀರವಾಗಿ ಪರಿಗಣಿಸಿದ್ದಾರೆ 

ಅದನ್ನ ಇಲ್ಲಿಗೆ ಬಿಡಲು ಸಾಧ್ಯ ಇಲ್ಲ

 ಡಿವಿ ಸದಾನಂದ ಗೌಡ ಅವರು ಅಡ್ಡ ಮತದಾನ ಆದ್ಮೇಲೆ ಕರೆ ಮಾಡಿದ್ರು.ಫೋನ್ ಸಿಕ್ಕಿಲ್ಲ,ಅದ್ರೆ ಪ್ರಧಾನ ಕಾರ್ಯದರ್ಶಿ ಗೆ ಫೋನ್ ಮಾಡಿದ್ದೆ ಅಂತಾ ಹೇಳಿದ್ರು

ಆದ್ರೆ‌ ಪ್ರಧಾನ ಕಾರ್ಯದರ್ಶಿ ಗೆ ಕೇಳಿದಾಗ ಸದಾನಂದ ಗೌಡ ಆ ರೀತಿಯ ಮಾಹಿತಿ ಹೇಳಿಲ್ಲ ಅಂತಾ ಹೇಳಿದ್ರು



ಎಸ್ ಟಿ ಸೋಮಶೇಖರ್ ನಮ್ಮ ಪಕ್ಷದ ಮೂರು ಶಾಸಕರೊಂದಿಗೆ ಸಂಪರ್ಕದಲ್ಲಿದ್ರು ಅನ್ನೋ ಮಾಹಿತಿ ಇದೆ 

ಅವರನ್ನ ರಕ್ಷಿಸಲು ಈ ರೀತಿ ಉಡಾಫೆ ಮಾತನಾಡಿದ್ದಾರೆ

 ಅಪಪ್ರಚಾರಕ್ಕೆ ನಮ್ಮವರೇ ಕಾರಣ ಹೇಳಿಕೆ ವಿಚಾರ 

ಎರಡು ಮೂರು ವರ್ಷದಿಂದ ನಾನು ಗಮನಿಸುತ್ತಿದ್ದೇನೆ 

ನಾನು ಎಲ್ಲಿ ಎಡವುತ್ತಿದ್ದೇನೆ ಅನ್ನೋದನ್ನ ನನಗೆ ನಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದೇನೆ 

ಹಿರಿಯರಿಗೆ ಅಗೌರವವಾಗುವ ಕೆಲಸವನ್ನ ನಾನಂತೂ ಮಾಡಿಲ್ಲ 

ಬರುವ ದಿನಗಳಲ್ಲಿ ಎಲ್ಲವು ಸರಿ ಹೋಗುತ್ತೆ

 ಮಂಗಳೂರು : ಬಿಡದಿ ಟೌನ್ ಶಿಪ್ ವಿಚಾರ

ರೈತರನ್ನು ಒಕ್ಕಲೆಬ್ಬಿಸೋಕೆ ನಾವು ಬಿಡೋದಿಲ್ಲ‌

ನಾವೂ ಹೋರಾಟವನ್ನು ಆರಂಭ ಮಾಡುತ್ತೇವೆ

ನಾಳೆ ಆ ಬಗ್ಗೆ ಬೆಂಗಳೂರಿನಲ್ಲಿ ಘೋಷಣೆ ಮಾಡುತ್ತೇನೆ

ಧರ್ಮಸ್ಥಳ ದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ

ನಾನು ಯಾವುದೇ ತಪ್ಪನ್ನ ಮಾಡಿಲ್ಲ ಹಿರಿಯರು ನನಗೆ ಸಲಹೆ ಕೊಟ್ಟಿದ್ದಾರೆ 

ಅ ಕಾರಣಕ್ಕೆ ಆಣೆ ಪ್ರಮಾಣ ಮಾಡಿಸುವ ನಿರ್ಧಾರ ಕೈ ಬಿಟ್ಟಿದ್ದೇನೆ 

ನನ್ನ ಮನಸಾಕ್ಷಿ ಏನು ಹೇಳಿತ್ತೋ ಅದನ್ನ ಮಾಡಿದ್ದೇನೆ



image