ದಕ್ಷಿಣ ಕನ್ನಡ

Kashipatna: ಸರಕಾರಿ ಪ್ರೌಢಶಾಲೆ ಕಾಶಿಪಟ್ಣದಲ್ಲಿ ಸಾಧಕ ವಿದ್ಯಾರ್ಥಿಗಳು, ಶಿಕ್ಷಕರಿಗೆ ಅಭಿನಂದನೆ ಹಾಗೂ ಶೈಕ್ಷಣಿಕ ಪರಿಕರ ವಿತರಣೆ



Kashipatna: ಸರಕಾರಿ ಪ್ರೌಢಶಾಲೆ ಕಾಶಿಪಟ್ಣದಲ್ಲಿ ಎಸ್.ಡಿ.ಎಂ.ಸಿ.,ಶಾಲಾ ಹಿರಿಯ ವಿದ್ಯಾರ್ಥಿಗಳು, ಗ್ರಾಮ ಪಂಚಾಯತ್ ಕಾಶಿಪಟ್ಣ ಹಾಗೂ ಊರಿನ ವಿದ್ಯಾಭಿಮಾನಿಗಳ ಸಹಭಾಗಿತ್ವದಲ್ಲಿ 2025–26ನೇ ಸಾಲಿನ ಎಸ್.ಎಸ್.ಎಲ್.ಸಿ. ಸಾರ್ವಜನಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳು ಹಾಗೂ ಸತತ ಮೂರನೇ ಬಾರಿ 100% ಫಲಿತಾಂಶಕ್ಕಾಗಿ ಶ್ರಮಿಸಿದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ವರ್ಗಾವಣೆಗೊಂಡ ಶಿಕ್ಷಕರಾದ ಶ್ರೀಯುತ ದೇವದಾಸ್ ನಾಯಕ್, ಶ್ರೀಮತಿ ಸೌಮ್ಯ ಕೆ. ಇವರಿಗೆ ಸನ್ಮಾನ ಸಮಾರಂಭ ನಡೆಯಿತು.

ಶ್ರೀ ಸತ್ಯ ದೇವತಾ ದೈವಸ್ಥಾನ ಅಳದಂಗಡಿ ಮತ್ತು ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಮತ್ತು ವಿವಿಧ ದಾನಿಗಳಿಂದ ವಿವಿಧ ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಸತ್ಯ ದೇವತಾ ದೈವಸ್ಥಾನ ಅಳದಂಗಡಿ ಇದರ ಆಡಳಿತದಾರರಾದ ಶಿವಪ್ರಸಾದ ಅಜಿಲರು ಕಾರ್ಯಕ್ರಮವನ್ನು ಉದ್ಘಾಟಿಸಿ “ಕಠಿಣ ಪರಿಶ್ರಮವೇ ಯಶಸ್ಸಿನ ಹೆಬ್ಬಾಗಿಲು” ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.


ವೇದಿಕೆಯಲ್ಲಿ ದಿಗಂಬರ ಜೈನ ವಿದ್ಯಾವರ್ಧಕ ಸಂಘ ಮೂಡುಬಿದರೆಯ ಸಂಚಾಲಕರಾದ ಶ್ರೀಯುತ ಹೇಮರಾಜ್ ಜೈನ್ ಬೆಳ್ಳಿಬೀಡು, ಜನಜಾಗೃತಿ ವೇದಿಕೆ ಬೆಳ್ತಂಗಡಿಯ ನಿಕಟ ಪೂರ್ವ ಅಧ್ಯಕ್ಷರು, ಪ್ರಗತಿಪರ ಕೃಷಿಕರು ಆಗಿರುವ ಮಿತ್ತೊಟ್ಟುಗುತ್ತು ಪಿ.ಕೆ ರಾಜು ಪೂಜಾರಿಯವರು, ಶಾಲೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಪ್ರವೀಣ್ ಪಿಂಟೋರವರು ದಾನಿಗಳಾದ ಅಕ್ತರ್ ಅಹಮದ್ ಹಾಸ್ಕೋ ಟ್ರೇಡರ್ಸ್, ಉದ್ಯಮಿಗಳಾದ ಅನಿಲ್ ಅಂಚನ್, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವೃಂದಾ ಪಿ.ಎಸ್ ಉಪಸ್ಥಿತರಿದ್ದರು.

ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಿರುವ ಪೋಷಕರಾದ ಹಮೀದ್ ಕೆ, ಪ್ರಕಾಶ್, ಸೌಮ್ಯ ಹಾಗೂ ಅಂದವಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಿದ ಶಫೀದ್ ರವರನ್ನು ರವರನ್ನು ಅಭಿನಂದಿಸಲಾಯಿತು.ಪೆರಾಡಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿಯಮಿತ ಇದರ ಅಧ್ಯಕ್ಷರು ಸಹಕಾರ ರತ್ನ ಪ್ರಶಸ್ತಿ ವಿಜೇತ ಶ್ರೀ ಸತೀಶ್ ಕೆ ಕಾಶಿಪಟ್ಣ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕಿ ಶ್ರೀಮತಿ ಅನುಲೇಖ ಸ್ವಾಗತಿಸಿ, ಗಣಿತ ಶಿಕ್ಷಕ ಶ್ರೀ ಶಶಿಧರ್ ಕೆ ನಿರೂಪಿಸಿ, ಗರಡಿ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಮನೋಜ್ ಕಾಶಿಪಟ್ಣ ಇವರು ವಂದಿಸಿದರು.