ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ, ಒಡಿಯೂರೂ ಶ್ರೀಗಳ ವಿಶೇಷ ಕಾಳಜಿಯಿಂದ ಇಂತಹ ಕಾರ್ಯಕ್ರಮ ಸಾಧ್ಯವಾಗಿದೆ, ಉಚಿತ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಅಗತ್ಯವಿದ್ದವರು ಎಲ್ಲರೂ ಪಡಕೊಳ್ಳಿ ಎಂದು ಒಡಿಯೂರು ಕ್ಷೇತ್ರದ ಸಂಸ್ಕಾರೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅಜಿತ್ ಹೇಳಿದರು. ಅವರು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ (ರಿ.) ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಕಲ್ಲಮುಂಡ್ಕೂರು ನಿಡ್ದೋಡಿ, ಮೂರುಕಾವೇರಿ ಮಹಾಮ್ಮಾಯಿ ಆಡಳಿತ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಡಾ|| ಪಿ. ದಯಾನಂದ ಪೈ & ಪಿ. ಸತೀಶ್ ಪೈ ಚಾರಿಟೇಬಲ್ ಎಸ್ಪಿಲೋ ವಿಷನ್ ಫೌಂಡೇಶನ್ ಬೆಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇದರ ಜಂಟಿ ಸಹಯೋಗದಲ್ಲಿ ಒಡಿಯೂರು ಶ್ರೀಗಳ ಜನ್ಮದಿನೋತ್ಸವದ ಪ್ರಯುಕ್ತ ಮೂರು ಕಾವೇರಿ ಮಹಾಮ್ಮಾಯಿ ದೇವಸ್ಥಾನದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಮತ್ತು ಉಚಿತ ಕನ್ನಡಕ ವಿತರಣಾ ಶಿಬಿರದಲ್ಲಿ ಮಾತನಾಡಿದರು .
ಈ ಸಂದರ್ಭ ನಿಡ್ಡೋಡಿ ಕಲ್ಲಮುಂಡ್ಕೂರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಒಡಿಯೂರು ಕ್ಷೇತ್ರದ ಸಂಸ್ಕಾರೋತ್ಸವ ಸಮಿತಿಯ ಸದಸ್ಯ ಗಣೇಶ್ ಅತ್ತಾವರ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕಿ ಸುಮಿತ್ರ, ರೋಟರಿ ಕ್ಲಬ್ ಕಿನ್ನಿಗೋಳಿ ಇದರ ನಿಯೋಜಿತ ಅಧ್ಯಕ್ಷ ಪ್ರವೀಣ್ ಸಾಲಿಯಾನ್, ಪ್ರಸಾದ್ ನೇತ್ರಾಲಯ ಇದರ ವೈದ್ಯರಾದ ಡಾ. ಶಿಲ್ಪಾ, ಘಟ ಸಮಿತಿಯ ಅಧ್ಯಕ್ಷ ಅಭಿಲಾಷ್, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯ ಚಂದ್ರ ರಾಣ್ಯ, ರಾಣ್ಯ ಸಮಾಜದ ಅಧ್ಯಕ್ಷ ಮೋಹನ್ ರಾಣ್ಯ ಮತ್ತಿತರರು ಉಪಸ್ಥಿತರಿದ್ದರು.
ಒಡಿಯೂರು ಗ್ರಾಮ ವಿಕಾಸ ಸಮಿತಿಯ ಸಂಯೋಜಕಿ ಶುಭಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸೇವಾ ದೀಕ್ಷಿತೆ ಸುರೇಖ ಧ್ಯನ್ಯವಾದ ಸಮರ್ಪಿಸಿದರು.
ವರದಿ - ನಿಶಾಂತ್
