ಮಂಗಳೂರು: ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸ ಎದುರುಪದವು ಮೂಡುಶೆಡ್ಡೆ ಇದರ
2025-2026 ನೇ ಸಾಲಿನ ವಾರ್ಷಿಕ ಮಹಾ ಸಭೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸ
ಸಭಾಂಗಣದಲ್ಲಿ ಹಾಜಿ ಹಸನಬ್ಬ ಅವರ ಗೌರವಾಧ್ಯಕ್ಷತೆಯಲ್ಲಿ ಸೈಫುದ್ದೀನ್ ಮತ್ತು ಅಬ್ದುಲ್ ರಝಕ್ ಮಂದಾರ ಅವರ ನೇತೃತ್ವದಲ್ಲಿ ನೆರವೇರಿತು. ಸಭೆಯನ್ನು ಮಸೀದಿ ಖತೀಬರಾದ ಸಿರಾಜುದ್ದೀನ್ ಫೈಝಿ ಅಲ್ ಮಅಬರಿ ದುಆ ಮೂಲಕ ಉದ್ಘಾಟಿಸಿದರು. ಬಳಿಕ 2026-27 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ನೂತನ ಅಧ್ಯಕ್ಷರಾಗಿ ಅಬ್ದುಲ್ ಬಶೀರ್ ಎ ಕೆ, ಉಪಾಧ್ಯಕ್ಷರಾಗಿ ಅಬ್ದುಲ್ ರಝಾಕ್ ಎ ಆರ್, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಆರಿಫ್, ಜೊತೆ ಕಾರ್ಯದರ್ಶಿಗಳಾಗಿ ಸಾಜುದ್ದೀನ್, ಅಹ್ಮದ್ ಬಾವ, ಕೋಶಾಧಿಕಾರಿಯಾಗಿ A P ಇಕ್ಬಾಲ್, ಸದಸ್ಯರಾಗಿ ಮಯ್ಯಾದಿ, ಮನ್ಸೂರ್, ಮುಸ್ತಫಾ ಎಕೆಎಂ, ಜಬ್ಬಾರ್ ಎಂ ಡಿ, ಅಬ್ದುಲ್ ರಝಕ್ ಸ್ಕೈ, ಹನೀಫ್ ಕಳಾಯಿ, ಕಲಂದರ್, ಮೊಯ್ದೀನ್, ಶಾಕೀರ್ ಅವರನ್ನು ಆಯ್ಕೆ ಮಾಡಲಾಯಿತು.

