ದಕ್ಷಿಣ ಕನ್ನಡ

Mulki: ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡಬಿದ್ರೆ ಮಂಡಲದ ಸಭೆ

 

ಮುಲ್ಕಿ: ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡಬಿದ್ರೆ ಮಂಡಲದ ಹಳೆಯಂಗಡಿ ಮಹಾಶಕ್ತಿ ಕೇಂದ್ರದ ಬೆಳ್ಳಾಯಾರು ಬೂತ್ ಸಂಖ್ಯೆ 123,124,125 ರ S I R ಸಭೆಯು ಕಲ್ಲಾಪು ವೇಗನಾಥ್ ಶೆಟ್ಟಿಗಾರ್ ಇವರ ಮನೆಯಲ್ಲಿ ಇಂದು ನಡೆಯಿತು.

ಈ ಸಭೆಯಲ್ಲಿ ಮಹಾಶಕ್ತಿ ಕೇಂದ್ರದ ಪ್ರಭಾರಿಯಾದ ರಾಜೇಶ್ ಅಮೀನ್,S I R ಪ್ರಭಾರಿಯಾದ ಗುರುರಾಜ್ ಮಲ್ಲಿಗೆಯಂಗಡಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶೋಬೇಂದ್ರ ಸಸಿಹಿತ್ಲು, ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಲಕ್ಷ್ಮಣ್ ಸಾಲ್ಯಾನ್, ಕಾರ್ಯದರ್ಶಿ ಜೀವನ್ ಶೆಟ್ಟಿ ಅಂಗರಗುಡ್ಡೆ, ಬಿಜೆಪಿ ಜಿಲ್ಲಾಓಬಿಸಿ ಮೋರ್ಚಾದ ಉಪಾಧ್ಯಕ್ಷರಾದ ವಿನೋದ್ ಬೆಳ್ಳಾಯರು, ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಕುಸುಮ ಚಂದ್ರಶೇಖರ್, ಶಕ್ತಿಕೇಂದ್ರದ ಪ್ರಮುಖರಾದ ದಿನೇಶ್ ಶೆಟ್ಟಿ, ಮಹಾಶಕ್ತಿಕೇಂದ್ರದ ಭಾರತಿ ಶೆಟ್ಟಿಗಾರ್ ಹಾಗೂ ಬೂತ್ ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ನಿಕಟಪೂರ್ವ ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರು ಪಾಲ್ಗೊಂಡರು.