ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶ್ ಹಾಗೂ ಕಿನ್ನಿಗೋಳಿಯ ಜನಪ್ರಿಯ ವೈದ್ಯರಾದ ಡಾ.ಪ್ರಕಾಶ್ ನಂಬಿಯಾರ್ ಆರೋಗ್ಯ ಮಾಹಿತಿ ನೀಡಿ ವೈದ್ಯಕೀಯ ತಪಾಸಣೆ ನಡೆಸಿದರು.
ಮುಂಡ್ಕೂರು ಶಿಕ್ಷಣ ಮತ್ತು ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು,ಕಾರ್ಯದರ್ಶಿ ಶರತ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರಕಾಶ್ ಕೆ.ಎನ್.,ಸದಸ್ಯರಾದ ಅಶೋಕ್ ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವಪ್ಪ ಸಪಳಿಗ,ಮುಂಡ್ಕೂರು ಕ್ಲಸ್ಟರ್ ಸಿಆರ್ ಪಿ ಶ್ರೀಕಾಂತ ಮೂಲ್ಯ,ಕಿನ್ನಿಗೋಳಿ ಇನ್ನರ್ ವೀಲ್ ನಿಯೋಜಿತ ಅಧ್ಯಕ್ಷೆ ಅಮೂಲ್ಯ ಕಟೀಲ್,ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೆಸಿಂತ,ಎಲ್ ಕೆಜಿ, ಯುಕೆಜಿ ವಿಭಾಗದ ಶಿಕ್ಷಕಿ ದೀಕ್ಷಾ ಶೆಟ್ಟಿ ಮತ್ತಿತರರಿದ್ದರು.ಶರತ್ ಸ್ವಾಗತಿಸಿ,ಶಿಕ್ಷಕಿ ಹಿಲ್ಡಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.ಮುಂಡ್ಕೂರಿನ ಶಿಕ್ಷಣ ಮತ್ತು ಸಮಾಜೋದ್ಧಾರಕ ಸಂಘದ ನೇತೃತ್ವದಲ್ಲಿ ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯಿತು.
ವರದಿ - ನಿಶಾಂತ್


