ಮುಂಡ್ಕೂರು ಜಾರಿಗೆಕಟ್ಟೆ ಶ್ರೀ ಕೊರಗಜ್ಹ ಕ್ಷೇತ್ರದಲ್ಲಿ ಕಿನ್ನಿಗೋಳಿ ವಿಜಯಾ ಕಲಾವಿದರ ಅಗೇಲು ಸೇವೆ ರವಿವಾರ ನಡೆಯಿತು.ಕೀರ್ತಿಶೇಷ ದಿವಾಕರ ಪೂಜಾರಿಯವರ ಪತ್ನಿ ಶಾಂತಾ ದಿವಾಕರ ಪೂಜಾರಿ ಹಾಗೂ ಪ್ರಸ್ತುತ ಕ್ಷೇತ್ರದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿರುವ ಧೀರಜ್ ಸುವರ್ಣರವರನ್ನು ಸನ್ಮಾನಿಸಲಾಯಿತು.
ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಅರುಣ್ ರಾವ್,ವಿಜಯಾ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ, ಗೌರವಾಧ್ಯಕ್ಷ ಭುವನಾಭಿರಾಮ ಉಡುಪ,ಸಂಚಾಲಕ ಸಾಯಿನಾಥ ಶೆಟ್ಟಿ, ಕಾರ್ಯದರ್ಶಿ ಲಕ್ಷಣ್ ಬಿ.ಬಿ.,ನಿರ್ವಾಹಕ ಸುಧಾಕರ ಸಾಲ್ಯಾನ್,ನಾಟಕ ಬರಹಗಾರ ಹರೀಶ್ ಪಡುಬಿದ್ರೆ,ಸ್ವರಾಜ್ ಶೆಟ್ಟಿ, ಮಮತಾ ಶರತ್ ಶೆಟ್ಟಿ ಹಾಗೂ ಸರ್ವ ವಿಜಯಾ ಕಲಾವಿದರಿದ್ದರು.ಕಜೆ ಶ್ರೀ ಮಹಾಮ್ಮಾಯೀ ಕ್ಷೇತ್ರದ ದೇವೀ ಪಾತ್ರಿ ಸತೀಶ್ ಮಂಚಕಲ್ ಪ್ರಾರ್ಥನೆ ನೆರವೇರಿಸಿದರು.
ವರದಿ - ನಿಶಾಂತ್
