ಬ್ಯಾಂಕಾಕ್: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸೋಮವಾರ ಮುಂಜಾನೆ ಘೋರ ದುರಂತವೊಂದು ಸಂಭವಿಸಿದೆ. ಇಲ್ಲಿನ ಪ್ರಸಿದ್ಧ 'ನಾ ಲಾಡ್‌ಪ್ರಾವೋ' (Na Ladprao) ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27 ಜನರು ಜೀವಂತವಾಗಿ ಸುಟ್ಟುಹೋಗಿದ್ದು, 63ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಶಾರ್ಟ್ ಸರ್ಕ್ಯೂಟ್ ಈ ಮಹಾ ದುರಂತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ. ತಡರಾತ್ರಿ ಪಬ್‌ನಲ್ಲಿ ಪಾರ್ಟಿ ಜೋರಾಗಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ. ದಟ್ಟ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆಯಿಂದಾಗಿ ಒಳಗಿದ್ದವರಿಗೆ ಹೊರಬರಲು ಸಾಧ್ಯವಾಗದೆ ಇಷ್ಟೊಂದು ದೊಡ್ಡ ಪ್ರಮಾಣದ ಸಾವು-ನೋವು ಸಂಭವಿಸಿದೆ ಎನ್ನಲಾಗಿದೆ.
ಶೌಚಾಲಯದ ಬಳಿ ಸಿಕ್ಕವು ಸಾಲು ಸಾಲು ಹೆಣಗಳು!
ಘಟನೆಯ ತೀವ್ರತೆಗೆ ಪಬ್‌ನ ಒಳಗಿದ್ದವರು ದಿಕ್ಕೆಟ್ಟು ಓಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಒದ್ದಾಡಿದ ಹಲವರು ಪಬ್‌ನ ಹಿಂಭಾಗದ ಶೌಚಾಲಯಗಳ ಕಡೆಗೆ ಓಡಿದ್ದು, ಅಲ್ಲಿಯೇ ಉಸಿರುಗಟ್ಟಿ ಹಾಗೂ ಬೆಂಕಿಗೆ ಆಹುತಿಯಾಗಿದ್ದಾರೆ. ಶೌಚಾಲಯದ ಬಳಿಯೇ ಹತ್ತಾರು ಮೃತದೇಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ದುರಂತದ ನಿಖರ ಕಾರಣ ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿರುವ ವಿಡಿಯೋಗಳಲ್ಲಿ, ಪಬ್‌ನ ಮುಂಭಾಗದಿಂದ ದಟ್ಟವಾದ ಕಪ್ಪು ಹೊಗೆ ಹಾಗೂ ಆಕಾಶದೆತ್ತರಕ್ಕೆ ಬೆಂಕಿ ಚಿಮ್ಮುತ್ತಿರುವುದು ಮತ್ತು ಒಳಗಿದ್ದ ಗ್ರಾಹಕರು ಪ್ರಾಣಭಯದಿಂದ ಕಿರುಚುತ್ತಾ ಹೊರಗೆ ಓಡಿ ಬರುತ್ತಿರುವ ದೃಶ್ಯಗಳು ಹೃದಯ ವಿದ್ರಾವಕವಾಗಿವೆ.
ಪ್ರತ್ಯಕ್ಷದರ್ಶಿ ಸಂಗೀತಗಾರ ಹೇಳಿದ್ದೇನು?
ಘಟನೆ ವೇಳೆ ಪಬ್‌ನಲ್ಲಿ ಪ್ರದರ್ಶನ ನೀಡುತ್ತಿದ್ದ ಮ್ಯೂಸಿಷಿಯನ್ ಒಬ್ಬರು ಆಘಾತಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. "ವೇದಿಕೆಯ ಪಕ್ಕದಲ್ಲಿದ್ದ ಎಲೆಕ್ಟ್ರಿಕ್ ಸರ್ಕ್ಯೂಟ್ ಬ್ರೇಕರ್‌ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿತು. ತಕ್ಷಣವೇ ಪವರ್ ಕಟ್ ಆಯಿತು ಮತ್ತು ಜೋರಾದ ಸ್ಫೋಟದ ಸೌಂಡ್ ಕೇಳಿಸಿತು. ಇಡೀ ಪಬ್ ಕತ್ತಲೆಯಲ್ಲಿ ಮುಳುಗಿತು ಮತ್ತು ದಟ್ಟ ಹೊಗೆ ತುಂಬಿಕೊಂಡಿದ್ದರಿಂದ ಯಾರಿಗೂ ದಾರಿ ಕಾಣದೆ ಸಿಲುಕಿಕೊಂಡರು" ಎಂದು ಅವರು ವಿವರಿಸಿದ್ದಾರೆ.
ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಥಾಯ್ಲೆಂಡ್ ಪ್ರಧಾನಿ ಅನುತಿನ್ ಚಾರ್ನ್ವಿರಾಕುಲ್ ಅವರು ಘಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತರಿಗೆ ಸೂಕ್ತ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
22 ಜನರ ಸ್ಥಿತಿ ಅತ್ಯಂತ ಗಂಭೀರ
ಬ್ಯಾಂಕಾಕ್ ಗವರ್ನರ್ ಚಾಡ್‌ಚಾರ್ಟ್ ಸಿಟ್ಟಿಪುಂಟ್ ಅವರ ಪ್ರಕಾರ, ಗಾಯಗೊಂಡಿರುವ 63 ಜನರನ್ನು ನಗರದ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ 22 ಮಂದಿಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಐಸಿಯು (ICU) ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕವಿದೆ. ಗಾಯಾಳುಗಳಲ್ಲಿ ಹಲವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಮತ್ತು ಕೆಲವರ ಬಳಿ ಯಾವುದೇ ಗುರುತಿನ ಚೀಟಿ ಇಲ್ಲದ ಕಾರಣ, ಮೃತರ ಮತ್ತು ಗಾಯಾಳುಗಳ ಪತ್ತೆ ಕಾರ್ಯ ಸವಾಲಾಗಿ ಪರಿಣಮಿಸಿದೆ.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೋರಾಡಿದ ಅಗ್ನಿಶಾಮಕ ಸಿಬ್ಬಂದಿ ಕೊನೆಗೂ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಪಬ್ ಸಂಪೂರ್ಣವಾಗಿ ಬೂದಿಯಾಗಿದೆ. ಅಪಘಾತದ ಸ್ಥಳದಲ್ಲಿ ನಾಪತ್ತೆಯಾದವರ ವಿವರ ಹಾಗೂ ಮಾಹಿತಿ ಪಡೆಯಲು ವಿಶೇಷ ಸಹಾಯ ಕೇಂದ್ರವನ್ನು (ನೋಂದಣಿ ಕೇಂದ್ರ) ತೆರೆಯಲಾಗಿದೆ.
"ಬೆಂಕಿ ಹತ್ತಿಕೊಂಡ ತಕ್ಷಣ ಇಡೀ ಪಬ್ ಕತ್ತಲೆಯಾಯಿತು. ಕಪ್ಪು ಹೊಗೆ ಆವರಿಸಿದ್ದರಿಂದ ಯಾರೂ ಯಾರನ್ನೂ ನೋಡಲು ಸಾಧ್ಯವಾಗಲಿಲ್ಲ. ನಮ್ಮ ಮ್ಯೂಸಿಕ್ ಬ್ಯಾಂಡ್‌ನ ಒಬ್ಬರು ಮೃತಪಟ್ಟಿದ್ದಾರೆ, ಮೂವರು ಆಸ್ಪತ್ರೆಯಲ್ಲಿದ್ದಾರೆ ಹಾಗೂ ಮತ್ತೊಬ್ಬರ ಪತ್ತೆಯಾಗಿಲ್ಲ" ಎಂದು ಸಮೀಪದಲ್ಲೇ ಇದ್ದ ಗಾಯಕಿ ಸುಕನ್ಯಾ ವೋಂಗ್‌ವೋಂಗ್ವೈ ಕಣ್ಣೀರು ಹಾಕಿದ್ದಾರೆ.
ಥಾಯ್ಲೆಂಡ್‌ನಲ್ಲಿ ಮುಂದುವರಿದ ಪಬ್ ದುರಂತಗಳ ಸರಣಿ!
ಥಾಯ್ಲೆಂಡ್‌ನಲ್ಲಿ ಇಂತಹ ಅಗ್ನಿ ದುರಂತಗಳು ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ.
- 2022: ಪೂರ್ವ ಥಾಯ್ಲೆಂಡ್‌ನ ಮ್ಯೂಸಿಕ್ ಪಬ್ ಒಂದರಲ್ಲಿ ನಡೆದ ಅಗ್ನಿ ಅವಘಡದಲ್ಲಿ 14 ಜನರು ಸಾವನ್ನಪ್ಪಿದ್ದರು.
- 2009 (ಜನವರಿ 1): ಬ್ಯಾಂಕಾಕ್‌ನ ಪ್ರಸಿದ್ಧ 'ಸಾಂಟಿಕಾ ನೈಟ್‌ಕ್ಲಬ್'ನಲ್ಲಿ ಹೊಸ ವರ್ಷದ ಪಾರ್ಟಿ ವೇಳೆ ನಡೆದ ಒಳಾಂಗಣ ಪಟಾಕಿ ಸಿಡಿತದ ದುರಂತದಲ್ಲಿ 66 ಮಂದಿ ಬಲಿಯಾಗಿದ್ದರು ಮತ್ತು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.