
ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳದ 'ಸೇವಾ ಸಪ್ತಾಹ'ದ ಅಂಗವಾಗಿ ತಾಲೂಕಿನ ಕುಂಟಲಪಲ್ಕೆ ಘಟಕದ ವತಿಯಿಂದ ವಿಶಿಷ್ಟ ಸೇವೆಯೊಂದು ನಡೆದಿದೆ. ಗೋಸೇವೆಯ ಸಂಕಲ್ಪದೊಂದಿಗೆ ಹಮ್ಮಿಕೊಳ್ಳಲಾಗಿದ್ದ 'ಗೋವಿಗಾಗಿ ಮೇವು' ಕಾರ್ಯಕ್ರಮದ ಅಡಿಯಲ್ಲಿ ಪಜೀರು ಗೋಶಾಲೆಗೆ ಒಂದು ಪಿಕಪ್ ಲೋಡ್ ಹಸಿ ಹುಲ್ಲನ್ನು ಉಚಿತವಾಗಿ ನೀಡಲಾಯಿತು.
ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷರಾದ ಪ್ರಸಾದ್ ಕುಮಾರ್ ರೈ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ್ ಸರಪಾಡಿ, ದೀಪಕ್ ಅಜೆಕಲ, ತಿಲಕ್ ಕಿಣಿ ಹಾಗೂ ಕುಂಟಲಪಲ್ಕೆ ಘಟಕದ ಪ್ರವೀಣ್ ಕುಲಾಲ್ ಉಪಸ್ಥಿತರಿದ್ದು, ಗೋಶಾಲೆಗೆ ಮೇವು ಹಸ್ತಾಂತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಘಟಕದ ಉಪಾಧ್ಯಕ್ಷ ಚಂದ್ರಹಾಸ ರೈ ಮೂಲಕಜೆ, ಬೇಬಿರಾಜ್ ಪೂಜಾರಿ, ದೀಕ್ಷಿತ್ ಬಸದಿ, ದೀಕ್ಷಿತ್ ಪೂಜಾರಿ ಗೆಣಿ, ಅಕ್ಷಯ್ ರೈ, ಸುಶಾನ್ ಶೆಟ್ಟಿ, ಪ್ರಶಾಂತ್ ಕುಲಾಲ್ ಮರಾಯಿದೊಟ್ಟು ಹಾಗೂ ವಿದ್ಯಾರ್ಥಿ ಪ್ರಮುಖ್ ಅಜ್ಞಾನ್ ರೈ ಮತ್ತು ಮೋನಪ್ಪ ಪೂಜಾರಿ ವಾರಂಬು ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿ ಗೋಸೇವೆಯಲ್ಲಿ ಕೈಜೋಡಿಸಿದರು. ಭಜರಂಗದಳದ ಈ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.