ದಕ್ಷಿಣ ಕನ್ನಡ

ಮಂಗಳೂರು : ಎಕ್ಕಾರು ದಶಮಿ ಹೋಟೆಲ್ ಬಳಿ ಭೀಕರ ಅಪಘಾತ: ಬಸ್-ಬುಲೆಟ್ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲೇ ದಾರುಣ ಸಾವು!

 


ಮಂಗಳೂರು: ನಗರದ ಹೊರವಲಯದ ಎಕ್ಕಾರು ದಶಮಿ ಹೋಟೆಲ್ ಸಮೀಪ ಬುಲೆಟ್ ಬೈಕ್ ಹಾಗೂ ಖಾಸಗಿ ಸರ್ವಿಸ್ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದುರಂತ ಘಟನೆ ಸೋಮವಾರ ನಡೆದಿದೆ.

​ಮೃತರ ಗುರುತು ಪತ್ತೆ

​ಮೃತಪಟ್ಟ ಬೈಕ್ ಸವಾರನನ್ನು ಕಿನ್ನಿಗೋಳಿ ರಾಜರತ್ನಪುರ ಮೀನಾಬೆಟ್ಟು ಮೂಲದ, ಪ್ರಸ್ತುತ ಬಜಪೆ ಪ್ಲಾಮಾ ರೆಸಿಡೆನ್ಸಿ ನಿವಾಸಿ ಪಕೀರಬ್ಬ ಅಬ್ದುಲ್ ಖಾದರ್ ಅವರ ಪುತ್ರ ಮೊಹಮ್ಮದ್ ಬಷೀರ್ (52) ಎಂದು ಗುರುತಿಸಲಾಗಿದೆ.

​ಘಟನೆಯ ಹಿನ್ನೆಲೆ

​ಸೋಮವಾರ ಎಕ್ಕಾರಿನ ದಶಮಿ ಹೋಟೆಲ್ ಮಾರ್ಗವಾಗಿ ಚಲಿಸುತ್ತಿದ್ದ 'ರಾಜಕುಮಾರ್' ಸರ್ವಿಸ್ ಬಸ್ ಹಾಗೂ ಮೊಹಮ್ಮದ್ ಬಷೀರ್ ಅವರು ಚಲಾಯಿಸುತ್ತಿದ್ದ ಬುಲೆಟ್ ಬೈಕ್ ನಡುವೆ ಈ ಭೀಕರ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸವಾರ ಬಷೀರ್ ಅವರ ತಲೆಯ ಭಾಗಕ್ಕೆ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದು, ಪರಿಣಾಮವಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.


ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲು

​ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಜಪೆ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ತಕ್ಷಣವೇ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ತನಿಖೆ ಮುಂದುವರಿಸಿದ್ದಾರೆ.



image