ದಕ್ಷಿಣ ಕನ್ನಡ

ಮಂಗಳೂರು : ರಾಹುಲ್ ಗಾಂಧಿ ವಿರುದ್ಧ ಶಾಸಕ ಯಶ್‌ಪಾಲ್ ಸುವರ್ಣ ಹೇಳಿಕೆ: ಮಮತಾ ಗಟ್ಟಿ ತೀವ್ರ ಖಂಡನೆ, ಕ್ಷಮೆಯಾಚನೆಗೆ ಆಗ್ರಹ

 


ಮಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾಡಿರುವ ವೈಯಕ್ತಿಕ ಆರೋಪ ಹಾಗೂ ಬಳಸಿರುವ ಶಬ್ದಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಿವೆ ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಸಂಸದೀಯ ನಡಾವಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಶಾಸಕರು ತಕ್ಷಣವೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಗಟ್ಟಿ, "ಯಾವುದೇ ಸೂಕ್ತ ಆಧಾರ ಅಥವಾ ಸಾಕ್ಷ್ಯಗಳಿಲ್ಲದೆ ಪ್ರಮುಖ ನಾಯಕರೊಬ್ಬರ ಘನತೆಗೆ ಕುಂದು ತರುವ ರೀತಿಯಲ್ಲಿ ಮಾತನಾಡುವುದು ಸರಿಯಾದ ರಾಜಕೀಯ ಸಂಸ್ಕೃತಿಯಲ್ಲ. ಶಾಸಕರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ವೈಯಕ್ತಿಕ ನಿಂದನೆಗೆ ಇಳಿಯುವ ಬದಲು, ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಸೂಕ್ತ," ಎಂದು ಹಿತವಚನ ಹೇಳಿದರು.

​ಶಾಸಕ ಯಶ್‌ಪಾಲ್ ಸುವರ್ಣ ಅವರು ತಕ್ಷಣವೇ ತಾವು ನೀಡಿರುವ ಬೇಜವಾಬ್ದಾರಿ ಹೇಳಿಕೆಯನ್ನು ಹಿಂಪಡೆಯಬೇಕು. ಅಷ್ಟೇ ಅಲ್ಲದೆ, ಈ ಕೀಳುಮಟ್ಟದ ಹೇಳಿಕೆಯ ಕುರಿತು ಸಂಬಂಧಪಟ್ಟ ಕಾನೂನು ಜಾರಿ ಅಧಿಕಾರಿಗಳು ಸೂಕ್ತ ಕಾನೂನು ಪರಿಶೀಲನೆ ನಡೆಸಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದರು.



image