ದಕ್ಷಿಣ ಕನ್ನಡ

ಮಂಗಳೂರು : ಕರಾವಳಿಯ ಖ್ಯಾತ 'ಮಹೇಶ್ ಮೋಟಾರ್ಸ್' ಮಾಲೀಕ ಮಹೇಶ್ ಶೇಖ್ ಇನ್ನಿಲ್ಲ: ಸಾರಿಗೆ ಕ್ಷೇತ್ರಕ್ಕೆ ತುಂಬಲಾರದ ನಷ್ಟ

 


ಮಂಗಳೂರು: ಕರಾವಳಿ ಭಾಗದ ಜನಪ್ರಿಯ ಖಾಸಗಿ ಸಾರಿಗೆ ಸಂಸ್ಥೆ 'ಮಹೇಶ್ ಮೋಟಾರ್ಸ್'ನ ಮಾಲೀಕ, ಸಮಾಜ ಸೇವಕ ಮಹೇಶ್ ಶೇಖ್ (46) ಅವರು ಬುಧವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

​ಮಂಗಳೂರಿನ ಪ್ರಸಿದ್ಧ ಎ.ಕೆ. ಜಯರಾಮ್ ಶೇಖರ್ ಅವರ ಪುತ್ರರಾಗಿರುವ ಮಹೇಶ್ ಶೇಖ್, ಹಲವು ವರ್ಷಗಳಿಂದ 'ಮಹೇಶ್ ಮೋಟಾರ್ಸ್' ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು. ಕರಾವಳಿ ಭಾಗದಾದ್ಯಂತ ಸಾರ್ವಜನಿಕರಿಗೆ ಗುಣಮಟ್ಟದ ಸಾರಿಗೆ ಸೇವೆ ನೀಡುವ ಮೂಲಕ ಸಾರಿಗೆ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಮುದ್ರೆಯೊತ್ತಿದ್ದರು.

​ಕುಟುಂಬಕ್ಕೆ ಎದುರಾಯ್ತು ಮತ್ತೊಂದು ಆಘಾತ

​ಸುಮಾರು ಎರಡು ವರ್ಷಗಳ ಹಿಂದೆಯಷ್ಟೇ ಮಹೇಶ್ ಅವರ ಸಹೋದರ ಪ್ರಕಾಶ್ ಶೇಖ್ ಅಕಾಲಿಕವಾಗಿ ಅಗಲಿದ್ದರು. ಈ ನೋವಿನಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಕುಟುಂಬಕ್ಕೆ ಮತ್ತೊಂದು ತೀವ್ರ ಆಘಾತ ಎದುರಾಗಿದೆ. ಮೃತರ ನಿಧನಕ್ಕೆ ಸಾರಿಗೆ ಕ್ಷೇತ್ರದ ಗಣ್ಯರು, ಆಪ್ತರು ಹಾಗೂ ಹಿತೈಷಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.


ಮೃತರು ತಂದೆ, ತಾಯಿ, ಪತ್ನಿ, ಪುತ್ರಿ, ಅಣ್ಣ, ಅಕ್ಕ ಹಾಗೂ ತಂಗಿ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

​ನಾಳೆ ಅಂತ್ಯಕ್ರಿಯೆ

​ಮೃತರ ಅಂತಿಮ ಸಂಸ್ಕಾರದ ವಿಧಿವಿಧಾನಗಳು ನಾಳೆ (ಗುರುವಾರ) ಬೆಳಿಗ್ಗೆ 10:00 ಗಂಟೆಗೆ ಕುಲಶೇಖರದಲ್ಲಿರುವ ಅವರ ನಿವಾಸ 'ಜ್ಯೋತಿ ಪ್ರಕಾಶ್'ನಲ್ಲಿ ಜರುಗಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



image