ದಕ್ಷಿಣ ಕನ್ನಡ

ಒಮಾನ್: ಸಹೋದ್ಯೋಗಿ ಚಾಲಿತ ವಾಹನ ಚಕ್ರಕ್ಕೆ ಸಿಲುಕಿ ಸಾಣೂರಿನ ಯುವಕ ದುರಂತ ಸಾವು

 


ಮೂಡುಬಿದಿರೆ: ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯುವಕನೋರ್ವ ಒಮಾನ್‌ನಲ್ಲಿ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಶೋಕದಾಯಕ ಘಟನೆ ವರದಿಯಾಗಿದೆ.

​ಮೂಡುಬಿದಿರೆ ತಾಲೂಕಿನ ಸಾಣೂರು ಗ್ರಾಮದ ಮೂಲಗುತ್ತು ನಿವಾಸಿ ರಾಜವರ್ಮ ಜೈನ್ (33) ದುರ್ಮರಣಕ್ಕೀಡಾದ ದುರದೃಷ್ಟಕರ ಯುವಕ.

​ಘಟನೆಯ ವಿವರ:

ರಾಜವರ್ಮ ಜೈನ್ ಅವರು ಕಳೆದ ಕೆಲವು ಸಮಯದಿಂದ ಒಮಾನ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಯಸ್ಥಳದಲ್ಲಿ ಸಹೋದ್ಯೋಗಿಯೊಬ್ಬರು ಕಂಪನಿಯ ವಾಹನವನ್ನು ರಿವರ್ಸ್ (ಹಿಮ್ಮುಖವಾಗಿ) ತೆಗೆದುಕೊಳ್ಳುತ್ತಿದ್ದಾಗ, ರಾಜವರ್ಮ ಅವರು ಆಕಸ್ಮಿಕವಾಗಿ ವಾಹನದ ಹಿಂಬದಿ ಚಕ್ರದ ಅಡಿಗೆ ಸಿಲುಕಿದ್ದಾರೆ ಎನ್ನಲಾಗಿದೆ.

​ಘಟನೆಯಿಂದಾಗಿ ತೀವ್ರ ರಕ್ತಸ್ರಾವ ಗಂಭೀರ ಗಾಯಗೊಂಡ ರಾಜವರ್ಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

​ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಯುವಕನ ಸಾವು ಸಾಣೂರು ಹಾಗೂ ಮೂಡುಬಿದಿರೆ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಕಂಬನಿ ಮತ್ತು ಶೋಕದ ವಾತಾವರಣವನ್ನು ಮೂಡಿಸಿದೆ.



image