ದಕ್ಷಿಣ ಕನ್ನಡ

Moodbidri: ನಾಪತ್ತೆಯಾಗಿದ್ದ ಜೆಸಿಬಿ ಗುತ್ತಿಗೆದಾರ ಕಾರ್ತಿಕ್ ಶೆಟ್ಟಿ ಶವವಾಗಿ ಪತ್ತೆ!


ಮೂಡುಬಿದಿರೆ: ಕಳೆದ ಒಂದು ದಿನದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಯುವ ಗುತ್ತಿಗೆದಾರರೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಇಲ್ಲಿನ ಅಲಂಗಾರು ಆಶ್ರಯ ಕಾಲೋನಿ ಸಮೀಪದ ಬಂಗೇರಬೆಟ್ಟು ಎಂಬಲ್ಲಿ ಶನಿವಾರ ವರದಿಯಾಗಿದೆ.

ಬಂಗೇರಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (34) ಮೃತಪಟ್ಟ ದುರ್ದೈವಿ. ಅವಿವಾಹಿತರಾಗಿದ್ದ ಇವರು ಸ್ಥಳೀಯವಾಗಿ ಹಿಟಾಚಿ ಹಾಗೂ ಜೆಸಿಬಿ ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರದಿಂದ ಕಾಣೆಯಾಗಿದ್ದ ಇವರ ಮೃತದೇಹವು ಶನಿವಾರ ಬೆಳಿಗ್ಗೆ ಮನೆಯ ಸಮೀಪದ ಶೆಡ್‌ ಒಂದರ ಹೊರಭಾಗದಲ್ಲಿ ಪತ್ತೆಯಾಗಿದೆ.

ಹೃದಯಾಘಾತದ ಶಂಕೆ:

ವಿಷಯ ತಿಳಿಯುತ್ತಿದ್ದಂತೆ ಮೂಡುಬಿದಿರೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಕಾರ್ತಿಕ್ ಶೆಟ್ಟಿ ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ನಿಖರವಾದ ಕಾರಣ ತಿಳಿಯಲು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.






image