ಕ್ರೈಂ

Puttur: ಖ್ಯಾತ ಫಿಟ್‌ನೆಸ್ ಟ್ರೈನರ್ ಸಚಿನ್ ರೈ ಆಕಸ್ಮಿಕ ನಿಧನ:ಮನೆ ಕರಾವಳಿ ಭಾಗದಲ್ಲಿ ಜನಪ್ರಿಯರಾಗಿದ್ದ ಜಿಮ್ ತರಬೇತುದಾರನ ನಿಧನಕ್ಕೆ ಕ್ರೀಡಾ ಪ್ರೇಮಿಗಳ ಕಂಬನಿ

ಪುತ್ತೂರು: ಕರಾವಳಿ ಜಿಲ್ಲೆಗಳ ಪ್ರಸಿದ್ಧ ಜಿಮ್ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ ಕಲಿಮಾರ್ ನಿವಾಸಿ ಸಚಿನ್ ರೈ (ಸಚಿನ್ ಮಾಡಂತ್ಯಾರ್) ಅವರು ಭಾನುವಾರ ಮುಂಜಾನೆ ಆಕಸ್ಮಿಕವಾಗಿ ಕೊನೆಯುಸಿರೆಳೆದಿದ್ದಾರೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಡಂತ್ಯಾರ್ ಮೂಲದವರಾದ ಸಚಿನ್ ರೈ, ಕಳೆದ ಕೆಲವು ವರ್ಷಗಳಿಂದ ಪುತ್ತೂರಿನ ಕಲಿಮಾರ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಕರಾವಳಿ ಭಾಗದಲ್ಲಿ ಅತ್ಯುತ್ತಮ ಫಿಟ್‌ನೆಸ್ ಮಾರ್ಗದರ್ಶಕರಾಗಿ ನೂರಾರು ಯುವಕರಿಗೆ ತರಬೇತಿ ನೀಡಿದ್ದ ಅವರು, ಕ್ರೀಡಾ ಮತ್ತು ಫಿಟ್‌ನೆಸ್ ವಲಯದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು.

ಕುಸಿದು ಬಿದ್ದು ಸಾವು:ಇಂದು ಬೆಳಗಿನ ಜಾವ ಸಚಿನ್ ರೈ ಅವರು ತಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಗಮನಿಸಿದ ಕುಟುಂಬಸ್ಥರು ಹಾಗೂ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ, ತಪಾಸಣೆ ನಡೆಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ತೀವ್ರ ಹೃದಯಾಘಾತದಿಂದ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಫಿಟ್‌ನೆಸ್ ಕ್ಷೇತ್ರದಲ್ಲಿ ಸದಾ ಸಕ್ರಿಯರಾಗಿದ್ದ ಯುವ ತರಬೇತುದಾರನ ದಿಢೀರ್ ನಿಧನಕ್ಕೆ ಪುತ್ತೂರು ಹಾಗೂ ಕರಾವಳಿ ಭಾಗದ ಕ್ರೀಡಾ ಅಭಿಮಾನಿಗಳು ಮತ್ತು ಅವರ ಒಡನಾಡಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



image