ದಕ್ಷಿಣ ಕನ್ನಡ

ಮೂಡುಬಿದಿರೆ : ಆಳ್ವಾಸ್ ಪ್ರಗತಿ - 2026: ಮೂಡುಬಿದಿರೆಯಲ್ಲಿ ಬೃಹತ್ ಉಚಿತ ಉದ್ಯೋಗ ಮೇಳಕ್ಕೆ ಅದ್ಧೂರಿ ಚಾಲನೆ

 


ಮೂಡುಬಿದಿರೆ: ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿಷ್ಠಿತ 16ನೇ ಆವೃತ್ತಿಯ 'ಆಳ್ವಾಸ್ ಪ್ರಗತಿ - 2026' ಎರಡು ದಿನಗಳ ಬೃಹತ್ ಉಚಿತ ಉದ್ಯೋಗ ಮೇಳಕ್ಕೆ ಶುಕ್ರವಾರ (ಆಗಸ್ಟ್ 7) ವಿದ್ಯಾಗಿರಿಯ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಚಾಲನೆ ದೊರೆತಿದೆ.

​ಕಾರ್ಯಕ್ರಮವನ್ನು ಸಚಿವ ಯು. ಟಿ. ಖಾದರ್ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಸ್ಥಳೀಯ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದ ಈ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ಮಾಜಿ ಸಚಿವರಾದ ಅಭಯಚಂದ್ರ ಜೈನ್ ಹಾಗೂ ಪಿ. ಜಿ. ಆರ್. ಸಿಂಧ್ಯಾ ಪಾಲ್ಗೊಂಡಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಿ. ಕೆ. ಮಹೇಶ್ ಶೇಖ್ ಅವರಿಗೆ ಭಾವಪೂರ್ಣ ಗೌರವ

ಉದ್ಯೋಗ ಮೇಳದ ಆರಂಭಿಕ ಯೋಜನಾ ರೂಪರೇಷೆ, ಸಂಘಟನೆ ಹಾಗೂ ಯಶಸ್ವಿ ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಇತ್ತೀಚೆಗೆ ಅಗಲಿದ ಎ. ಕೆ. ಮಹೇಶ್ ಶೇಖ್ ಅವರ ಸ್ಮರಣಾರ್ಥ ಈ ಬಾರಿಯ ಮುಖ್ಯ ವೇದಿಕೆಗೆ ಅವರ ಹೆಸರನ್ನಿಟ್ಟು ಗೌರವ ಸಲ್ಲಿಸಲಾಯಿತು.


ಸಾಧಕರಿಗೆ ವಿಶೇಷ ಪುರಸ್ಕಾರ

ಉದ್ಯಮಶೀಲತೆ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಐವರು ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು:

  • ಕೆ. ಎನ್. ಜನಾರ್ದನ - ವ್ಯವಸ್ಥಾಪಕ ನಿರ್ದೇಶಕರು, ಶ್ರೀಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೀಣೋದ್ಯೋಗ ಸಂಸ್ಥೆ (ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್, ಬೆಳ್ತಂಗಡಿ)
  • ಡಾ. ಕೆ. ಪ್ರಕಾಶ್ ಶೆಟ್ಟಿ - ಸಂಸ್ಥಾಪಕರು ಮತ್ತು ಅಧ್ಯಕ್ಷರು, ಎಂಆರ್‌ಜಿ ಗ್ರೂಪ್
  • ಕುಸುಮೋದರ ಡಿ. ಶೆಟ್ಟಿ - ಸಂಸ್ಥಾಪಕರು ಮತ್ತು ಅಧ್ಯಕ್ಷರು, ಭವಾನಿ ಗ್ರೂಪ್
  • ವಿನ್ಸೆಂಟ್ ಕುಟಿನ್ಹಾ - ವ್ಯವಸ್ಥಾಪಕ ನಿರ್ದೇಶಕರು, ಪ್ರೊವಿಟ್ ಫುಡ್ಸ್ ಪ್ರೈ. ಲಿ.
  • ಮಹಮ್ಮದ್ ಅಸ್ಪಾಕ್ - ಸಹ ಸಂಸ್ಥಾಪಕರು, ಎಕ್ಸ್‌ಪರ್ಟೀಸ್ ಕಾಂಟ್ರಾಕ್ಟಿಂಗ್ ಕಂಪೆನಿ


26,300ಕ್ಕೂ ಹೆಚ್ಚು ಉದ್ಯೋಗಾವಕಾಶಗಳು

ಈ ಬಾರಿಯ ಮೇಳದಲ್ಲಿ ದೇಶ-ವಿದೇಶಗಳ 350ಕ್ಕೂ ಅಧಿಕ ಮುಂಚೂಣಿ ಕಂಪೆನಿಗಳು ಭಾಗವಹಿಸುತ್ತಿವೆ. ಐಟಿ (IT), ಐಟಿಇಎಸ್ (ITES), ಉತ್ಪಾದನೆ, ಬ್ಯಾಂಕಿಂಗ್, ಆರೋಗ್ಯ ಮತ್ತು ಔಷಧೀಯ, ಆತಿಥ್ಯ, ಚಿಲ್ಲರೆ ವ್ಯಾಪಾರ (Retail), ಮಾಧ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳು ಸೇರಿದಂತೆ ವೈವಿಧ್ಯಮಯ ವಲಯಗಳಲ್ಲಿ 26,300ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಅಭ್ಯರ್ಥಿಗಳಿಗೆ ಲಭ್ಯವಿವೆ.



image