ಬಂಟ್ವಾಳ: ಕರಾವಳಿ ಭಾಗದಲ್ಲಿ ಮಾರಕ ಮಾದಕ ದ್ರವ್ಯಗಳ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು, ಭರ್ಜರಿ ದಾಳಿ ನಡೆಸಿ ನಿಷೇಧಿತ ಎಂ.ಡಿ.ಎಂ.ಎ ಮತ್ತು ಗಾಂಜಾ ಸಹಿತ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ (ASP) ಯಶ್ ಕುಮಾರ್ ಶರ್ಮಾ (IPS) ಅವರ ನೇತೃತ್ವದ ವಿಶೇಷ ತಂಡವು ಆಸ್ಟ್ 12 ರಂದು ಬಂಟ್ವಾಳ ಕಾವಳಪಡೂರು ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಿದೆ.
ವಶಪಡಿಸಿಕೊಂಡ ಸೊತ್ತುಗಳ ವಿವರ:
ಪೋಲಿಸರ ದಾಳಿ ವೇಳೆ ಸಾಗಾಟಕ್ಕೆ ಬಳಸುತ್ತಿದ್ದ ಕಾರು ಸೇರಿದಂತೆ ಒಟ್ಟು ₹4.90 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.
- ಎಂ.ಡಿ.ಎಂ.ಎ (MDMA): 22.57 ಗ್ರಾಂ (ಮೌಲ್ಯ ಸುಮಾರು ₹2.25 ಲಕ್ಷ)
- ಗಾಂಜಾ: 30.34 ಗ್ರಾಂ
- ಇತರ ವಸ್ತುಗಳು: 5 ಮೊಬೈಲ್ ಫೋನ್‌ಗಳು ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರು.
ಬಂಧಿತ ಆರೋಪಿಗಳು:
- ನಾಶೀರ್ ಹುಸೇನ್ (37) – ಅಡ್ಯಾರ್, ಮಂಗಳೂರು.
- ಮಹಮ್ಮದ್ ಜುನೈದ್ (38) – ಗೋಳ್ತಮಜಲು, ಬಂಟ್ವಾಳ.
- ಮೊಹಮ್ಮದ್ ಅಫ್ರೀದಿ (24) – ಕಂಕನಾಡಿ, ಮಂಗಳೂರು.
ಬಂಧಿತರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ (NDPS Act 1985) ಅಡಿಯಲ್ಲಿ ಕ್ರೈಂ ನಂಬರ್ 112/2026 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡ:
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಕೆ.ವಿ, ಪಿ.ಎಸ್.ಐ ರನ್ನ ಗೌಡ ಎಸ್ ಪಾಟೀಲ್, ಪ್ರೊಬೇಷನರಿ ಪಿ.ಎಸ್.ಐಗಳಾದ ಶಿವರಾಮ್ ಮತ್ತು ಫಕೀರಪ್ಪ ಅವರನ್ನೊಳಗೊಂಡ ತಂಡ ಭಾಗವಹಿಸಿತ್ತು.
ಠಾಣಾ ಸಿಬ್ಬಂದಿಗಳಾದ ಉದಯ ರೈ, ರಾಧಾಕೃಷ್ಣ ಕೆ, ಪ್ರವೀಣ್ ರೈ, ಪ್ರಶಾಂತ್, ಲೋಕೇಶ್, ವಿವೇಕ್ ರೈ, ಕುಮಾರ್, ಬಸವರಾಜ್, ಶ್ರೀಧರ್ ಹಾಗೂ ಧನ್ಯಶ್ರೀ ಕಾರ್ಯಾಚರಣೆಯಲ್ಲಿದ್ದರು. ಜಿಲ್ಲಾ ತಾಂತ್ರಿಕ ವಿಭಾಗದ (Technical Cell) ದಿವಾಕರ್ ಮತ್ತು ಸಂಪತ್ ತಾಂತ್ರಿಕ ನೆರವು ನೀಡಿದ್ದಾರೆ.
