ದಕ್ಷಿಣ ಕನ್ನಡ

ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್‌ನಿಂದ 588ನೇ ಸೇವಾ ಯೋಜನೆ – 'ಆಟಿದ ಕಷಾಯ, ಮೆತ್ತೆ ಗಂಜಿ' ವಿತರಣೆ

 


ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಅವರ ನೇತೃತ್ವದಲ್ಲಿ, ಟ್ರಸ್ಟ್‌ನ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ತನ್ನ 588ನೇ ಸೇವಾ ಯೋಜನೆಯ ಭಾಗವಾಗಿ 'ಆಟಿದ ಕಷಾಯ ಹಾಗೂ ಮೆತ್ತೆ ಗಂಜಿ ವಿತರಣಾ ಕಾರ್ಯಕ್ರಮ'ವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

​ಬೆಳ್ತಂಗಡಿ ಬಸ್ ನಿಲ್ದಾಣದ ಆವರಣದಲ್ಲಿ ಬೆಳಿಗ್ಗೆ 6:00 ಗಂಟೆಗೆ ಜರುಗಿದ ಈ ಕಾರ್ಯಕ್ರಮವು ಸತತ 3 ನೇ ವರ್ಷದ ಆಟಿದ ಕಷಾಯ ಹಾಗೂ ಮೆತ್ತೆ ಗಂಜಿ ವಿತರಣೆಯಾಗಿದೆ.

ಕಷಾಯ ಹಾಗೂ ಮೆತ್ತೆಗಂಜಿಯನ್ನು ksrtc ಬಸ್ ಚಾಲಕರು ಹಾಗೂ ನಿರ್ವಾಹಕರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸ್ವೀಕರಿಸಿದರು.

​ಉದ್ಘಾಟನೆ ಮತ್ತು ಅಧ್ಯಕ್ಷತೆ:

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ ಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಜಗದೀಶ್ ಲಾಯಿಲ ವಹಿಸಿದ್ದರು. ರಾಜ ಕೇಸರಿ ಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷರಾದ ಸಂತೋಷ್ ಕೂಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸ್ಥಳೀಯ ತಹಶೀಲ್ದಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

​


ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ, ಪತ್ರಕರ್ತರ ಸಂಘದ ಅಧ್ಯಕ್ಷರಾದ ತುಕಾರಾಮ್ ಬಿ., ವೈಭವ್ ಹಾರ್ಡ್‌ವೇರ್ ಮಾಲಕರಾದ ಸೀತಾರಾಮ್ ಶೆಟ್ಟಿ ಗುರುವಾಯನಕೆರೆ, ಹಾಗೂ ರಾಜ ಕೇಸರಿ ಸೇವಾ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಂಗಳಾದೇವಿ, ಜಿಲ್ಲಾ ಸಂಚಾಲಕ ಪ್ರಸಾದ್ ಕುಲಾಲ್, ಕ್ರೀಡಾ ಸಂಚಾಲಕ ಸಂದೀಪ್ ಸಾಲ್ಯಾನ್, ಬಂಟ್ವಾಳ ತಾಲೂಕು ಅಧ್ಯಕ್ಷ ಗೌತಮ್ ಪೂಜಾರಿ ಮತ್ತು ಬೆಳ್ತಂಗಡಿ ತಾಲೂಕು ಜೊತೆ ಕಾರ್ಯದರ್ಶಿ ವಿನೋದ್ ಲಾಯಿಲ ಭಾಗವಹಿಸಿದ್ದರು.

​ಇದರೊಂದಿಗೆ ಪ್ರಮುಖರಾದ ಮನೋಹರ್ ಬಲಾಂಜ, ವರುಣ್ ಕುಮಾರ್ ಬಪ್ಪನಾಡು, ಶರತ್ ಕುಮಾರ್, ಮನೋಜ್ ಬಂಜನಪದ, ಸತೀಶ್ ವಾಮನಜೂರು, ಸಂದೀಪ್ ಬೆಳ್ತಂಗಡಿ, ಶರತ್ ಕೆ.ಎಸ್., ಸಂದೇಶ್, ಶರತ್ ಕರಾಯ, ಪ್ರವೀಣ್ ಆಚಾರ್ಯ, ಸಂತೋಷ್ ಲಾಯಿಲ, ಪುನೀತ್ ಲಾಯಿಲ, ಪ್ರಶಾಂತ್ ಗುರುವಾಯನಕೆರೆ, ದೇವರಾಜ್ ಪೂಜಾರಿ, ಕಿಶನ್ ಚಂದ್ರ, ಜಯಂತ್, ಅಕ್ಷತ್, ವಸಂತ್, ಗಣೇಶ್, ಸತೀಶ್ ಕಂಗಿತ್ತಿಲ್, ನಿತೇಶ್ ಹಾಗೂ ಪ್ರಜ್ವಲ್ ಸೇರಿದಂತೆ ಹಲವು ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.



image