ದಕ್ಷಿಣ ಕನ್ನಡ

ಪದ್ಮುಂಜ : ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸತತ 6ನೇ ಬಾರಿ ‘ಅತ್ಯುತ್ತಮ ಸಹಕಾರಿ ಸಂಘ’ ಪ್ರಶಸ್ತಿ ಗೌರವ



ಪದ್ಮುಂಜ: ಕಳೆದ ಆರ್ಥಿಕ ವರ್ಷದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಇಲ್ಲಿನ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (SCDCC ಬ್ಯಾಂಕ್) ನೀಡುವ ಪ್ರತಿಷ್ಠಿತ “ವರ್ಷದ ಅತ್ಯುತ್ತಮ ಸಹಕಾರಿ ಸಂಘ” ಪ್ರೋತ್ಸಾಹಕ ಪ್ರಶಸ್ತಿ ಒಲಿದುಬಂದಿದೆ.

​ಈ ಗೌರವದೊಂದಿಗೆ ಸಂಘವು ಸತತ ಆರನೇ ವರ್ಷವೂ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಸಾಧನೆಯ ಹ್ಯಾಟ್ರಿಕ್ ಮೀರಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಗಸ್ಟ್ 22ರಂದು ಜರುಗಿದ SCDCC ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಈ ಗಣನೀಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

​ಮಹಾಸಭೆಯಲ್ಲಿ ಎಸ್‌ಸಿಡಿಸಿ‌ಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಸಮ್ಮುಖದಲ್ಲಿ ಪದ್ಮುಂಜ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಿ. ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಅಂಕಿತಾ ಬಿ. ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

​


ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಶೋಕ್ ಪಿ., ನಿರ್ದೇಶಕರಾದ ಡೀಕಯ್ಯ ಗೌಡ, ರುಕ್ಮಯ್ಯ ಗೌಡ, ಪ್ರಸಾದ್ ಎ., ಉದಯ ಬಿ.ಕೆ. ಹಾಗೂ ಚಂದನ್ ಕುಮಾರ್ ಉಪಸ್ಥಿತರಿದ್ದರು.

​ಸಂಘದ ಸುಸ್ಥಿರ ಹಣಕಾಸು ಪ್ರಗತಿ ಹಾಗೂ ಗ್ರಾಹಕರಿಗೆ ನೀಡುತ್ತಿರುವ ದಕ್ಷ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಈ ಪ್ರಶಸ್ತಿಯು ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಸಂಘದ ಸದಸ್ಯರಲ್ಲ ಹರ್ಷ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಸೇವೆ ಸಲ್ಲಿಸುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.



image