
ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ದೈವ ಕೊಡಮಣಿತ್ತಾಯ, ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪೊಸರಡ್ಕ ಕ್ಷೇತ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ಗುರುವಾಯನಕೆರೆ) ವತಿಯಿಂದ 2 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಾಗಿದೆ.
ಇತ್ತೀಚೆಗೆ ಮರೋಡಿ ಪೊಸರಡ್ಕ ಕ್ಷೇತ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿದ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ಈ ಧನಸಹಾಯವನ್ನು ಒದಗಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನದಲ್ಲಿ ಈ ನೆರವು ಬಿಡುಗಡೆಯಾಗಿದೆ.
ಗುರುವಾಯನಕೆರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಯೋಜನಾಧಿಕಾರಿ ಹರೀಶ್ ಆರ್.ಎಸ್. ಅವರು ಕ್ಷೇತ್ರಕ್ಕೆ ಆಗಮಿಸಿ 2 ಲಕ್ಷ ರೂಪಾಯಿಗಳ ಚೆಕ್ ಅನ್ನು ಪೊಸರಡ್ಕ ಕ್ಷೇತ್ರದ ಆಡಳಿತ ಸಮಿತಿಯ ಪ್ರಮುಖರಿಗೆ ಹಸ್ತಾಂತರಿಸಿ, ಶುಭ ಹಾರೈಸಿದರು.
ಪ್ರಮುಖರ ಉಪಸ್ಥಿತಿ:
ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಪೊಸರಡ್ಕ ಬ್ರಹ್ಮಕುಂಭಾಭಿಷೇಕ ಸಮಿತಿಯ ಗೌರವಾಧ್ಯಕ್ಷರಾದ ಕೆ. ಹೇಮರಾಜ್ ಬೆಳ್ಳಿಬೀಡು, ಸುರೇಂದ್ರ ಬಳ್ಳಾಲ್ ಮಲಾರಬೀಡು, ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು ಕುಕ್ಕೇರಬೆಟ್ಟು ಗುತ್ತು, ಕಾರ್ಯಾಧ್ಯಕ್ಷರಾದ ಎಂ.ಎಸ್. ಪೂಜಾರಿ ಉಚ್ಚೂರು ಹಾಗೂ ನಾರಾಯಣ ಪೂಜಾರಿ ಉಚ್ಚೂರು ಉಪಸ್ಥಿತರಿದ್ದರು.
ಅಲ್ಲದೆ, ಕಾರ್ಯದರ್ಶಿ ಆದಿತ್ಯ ಪಿ.ಕೆ. ಮತ್ತೊಟ್ಟು, ಜೊತೆ ಕಾರ್ಯದರ್ಶಿಗಳಾದ ವಿಶು ಕುಮಾರ್ ಜೈನ್ ಪಾರೊಟ್ಟು, ಯೋಗೇಂದ್ರ ಆಚಾರ್ಯ ಸೌಪರ್ಣಿಕ, ಉಪಾಧ್ಯಕ್ಷರಾದ ಆನಂದ ಶೆಟ್ಟಿ ಬೆರ್ಕೆ, ಸುಂದರ ಕುರುಡಾಯಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರೋಡಿ 'ಎ' ಒಕ್ಕೂಟದ ಅಧ್ಯಕ್ಷ ರಾಜು ಪೂಜಾರಿ, 'ಬಿ' ಒಕ್ಕೂಟದ ಅಧ್ಯಕ್ಷ ರಾಜು ಪೂಜಾರಿ, ಮೇಲ್ವಿಚಾರಕಿ ದಿವ್ಯ ಕೆ.ಎಸ್., ಸೇವಾ ಪ್ರತಿನಿಧಿ ಶಶಿಕಲಾ, ವಿ.ಎಲ್.ಇ. ಸೌಮ್ಯ, ಕಾರ್ಯದರ್ಶಿ ರಂಜಿತ್, ಜೊತೆ ಕಾರ್ಯದರ್ಶಿ ರಾಜಶ್ರೀ ಸೇರಿದಂತೆ ಕ್ಷೇತ್ರದ ಹಲವಾರು ಭಕ್ತಾದಿಗಳು ಹಾಗೂ ಧಾರ್ಮಿಕ ಪ್ರಮುಖರು ಭಾಗವಹಿಸಿದ್ದರು.