ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಹಾಗೂ ಬಿಜೆಪಿ ಪಕ್ಷದ ತತ್ವ-ಸಿದ್ಧಾಂತಗಳಿಗೆ ಆಕರ್ಷಿತರಾಗಿ, ಕಾಂಗ್ರೆಸ್‌ನ ದುರಾಡಳಿತ ಮತ್ತು ಒಲೈಕೆ ರಾಜಕಾರಣಕ್ಕೆ ಬೇಸತ್ತು ಕಾಂಗ್ರೆಸ್ ಬೆಂಬಲಿತ ಪ್ರಮುಖ ನಾಯಕರು ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಪುದುವೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಮೋಹನ್ ಕೆ., ಅವರ ಪತ್ನಿ ಉಮಾದೇವಿ, ಮೊಮ್ಮಗ ಆದರ್ಶ್ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಕೃಷ್ಣಪ್ಪ ಪೂಜಾರಿ ಅವರು ಕಮಲ ಪಾಳಯ ಸೇರಿದ ಪ್ರಮುಖರಾಗಿದ್ದಾರೆ.
ಸೇರ್ಪಡೆ ಕಾರ್ಯಕ್ರಮದಲ್ಲಿ ಉಜಿರೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ಯಶವಂತ್, ಶಕ್ತಿಕೇಂದ್ರ ಅಧ್ಯಕ್ಷ ಪೂರ್ಣಾಕ್ಷ, ಬೂತ್ ಅಧ್ಯಕ್ಷ ನಿತ್ಯಾನಂದ ಗೌಡ, ಹಾಗೂ ಸೋಯಿ ವರ್ಗೀಸ್, ಚಂದ್ರಹಾಸ ಗೌಡ, ಪ್ರಮುಖರಾದ ದಿವಾಕರ ಗೌಡ ಮುಚ್ಚಾರು, ಲಿಂಗಪ್ಪ ಸಾಲ್ಯಾನ್, ಭಾಸ್ಕರ ಅಡ್ಯ, ರಂಗನಾಥ್, ದಾಮೋದರ ಗೌಡ, ಹೊನ್ನಪ್ಪ ಗೌಡ, ಕುಕ್ಕಪ್ಪ ಗೌಡ, ಅಜಿತ್ ಜೈನ್, ಪ್ರಸನ್ನ ಹೆಬ್ಬಾರ್, ನಾರಾಯಣ ಪೂಜಾರಿ, ಶಶಿಧರ್ ಗುಂಪಕಲ್ಲು, ಧನ್ಯಕುಮಾರ್, ಶೇಖರ ಗೌಡ, ಶೇಖರ ಪೂಜಾರಿ, ಶಜು, ಸುರೇಶ್ ಕೇರ್ಯ, ಓಬಯ್ಯ ಮುಜಾರ್ ದಡ್ಡು, ಅಣ್ಣು ಗೌಡ, ರೇಣುಕಾ, ರಮೇಶ್ ರಾವ್, ಚೇತನ್ ಮುಚ್ಚಾರು ಸೇರಿದಂತೆ ಹಲವು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
