ಕವನ

ಬಾಲ್ಯದ ನೆನಪು

"ಬಾಲ್ಯದ ನೆನಪು"

ಪೆನ್ನುಹಿಡಿದೆ ಕುಳಿತೆನೆಂದು ಬರೆಯಲು...            ಯೋಚಿಸುತ್ತಾ ಕುಳಿತು ಎನ್ನ ಬಾಲ್ಯದ ದಿನಗಳ ಮೆಲುಕು ಹಾಕಲು 

ಸ್ನೇಹಿತರು ದೂರವಾಗಿ ಆಗಿದೆ ವರುಷ...                    ಕಳೆದು ಹೋಗಿದೆ ಎಂದೋ ಆ ಬಾಲ್ಯದ ಪೌರುಷ...        ಎಲ್ಲೋ ಸಿಕ್ಕಾಗ ಕಣ್ಣಿಗೆ ಅದೆಷ್ಟೋ ಹರುಷ..,

ನೆನಪಾಯಿತು ಅಂದು ಜೊತೆಗೂಡಿ ಆಡಿದ ಆಟ...    ಕಲಿಸುತ್ತಿದೆ ಇಂದು ಜೀವನದ ಪಾಠ....

ಅಂದು ಇತ್ತು ದುಡಿಯಬೇಕೆನ್ನುವ ಹಂಬಲ...                ಇಂದು ಎಷ್ಟು ದುಡಿದರೂ ಸಾಕಾಗುತ್ತಿಲ್ಲ ಸಂಬಳ...

ಇರುಳಿನಲ್ಲೊಮ್ಮೆ ಇಳಿಮುಖದಿ ಕುಳಿತಾಗ.....      ಮನಸಿನಲ್ಲೊಮ್ಮೆ ಹಳೇನೆನಪು ಮೂಡಿದಾಗ..,      ಬಾರದಿರಲಿ ಕಣ್ಣಲಿ ಹನಿಹನಿ ಇಬ್ಬನಿ.



✍️ರಚನೆ :ದೀಕ್ಷಿತ ರೈ 










image