ಕವನ

ಕೇಸರಿ, ಬಿಳಿ, ಹಸಿರು

"ಕೇಸರಿ, ಬಿಳಿ, ಹಸಿರು"

ಇಂದು ಮುಂಜಾನೆಯ ಸುಪ್ರಭಾತದಲಿ ಸ್ವಾತಂತ್ರೋತ್ಸವದ ಸಂಭ್ರಮ... ದೇಶಕಾಯೋ ಯೋಧರಿಗೆ ಮೊದಲ ನಮನ..,

ಧ್ವಜ ಏರಿ ನಿಂತು ನಗುತಿಹಳು ಕೇಸರಿ ಆಕಾಶದೆತ್ತರಕ್ಕೆ ಏರಿ ಇಂದು ಪ್ರತಿಯೊಬ್ಬರ ಧ್ವನಿಯಲ್ಲಿ ಮೊಳಗಬೇಕು ರಾಷ್ಟ್ರ ಗೀತೆ ಒಂದು ಬಾರಿ...,

ಸತ್ಯ,ಶಾಂತಿ, ಐಕ್ಯತೆಯ ಪ್ರತೀಕ ಬಿಳಿ ಸಮರದೊಳು       ಯೋಧರ ನೆತ್ತರ ಓಕುಳಿ ಬಲಿಷ್ಠ ಭಾರತಕ್ಕಾಗಿ ಕಟ್ಟಬೇಕು ಮಾನವ ಸರಪಳಿ...,

ಪ್ರಕೃತಿ ಜೊತೆ ಕಂಗೊಳಿಸುತ್ತಿಹ ಬಣ್ಣ ಹಸಿರು ಒಂದು ಬಾರಿ ನಿಂತರೆ ಮಾನವನ ಉಸಿರು ಸ್ಮರಿಸಿ ಇಂದು ದೇಶಕ್ಕಾಗಿ ಹೋರಾಡಿದ ಆ ವೀರರ ಹೆಸರು


✍️ರಚನೆ :ದೀಕ್ಷಿತ ರೈ 









image