ಕವನ


ಭಾಗ್ಯದ ಲಕ್ಷ್ಮೀ

ಮುಗಿಲ ಕಾರ್ಮೋಡ ದ ಜೊತೆ ನೇಸರನ ಆಟ....ಏರಿದ ಅಂಬರದಲ್ಲಿ ತಾರೆಗಳ ಓಟ ಜರತಾರಿಯ ಸೀರೆಯಲ್ಲಿ ತಾಯಿಲಕ್ಷ್ಮೀ ದೇವಿಯ ರೂಪ .., ಇಂದು ಪ್ರತಿ ಮನೆ ಮನದಲ್ಲೂ ವರಮಹಾಲಕ್ಷ್ಮೀ ...

ಪನ್ನೀರ ಹನಿಗೆ ತಂಪಾಗಿದೆ ಇಳೆ... ಪ್ರತಿ ಹೆಣ್ಣಲ್ಲೂ ಎದ್ದು ಕಾಣುತಿದೆ ಲಕ್ಷ್ಮಿ ದೇವಿ ಕಳೆ...,

ಕಾಡಿಗೆಯ ಮರೆಯಿಂದ ಹೊಳೆಯುತಿಹ ನಿನ್ನ ಕಣ್ಣುಗಳು ..., ಹಾಲುಕ್ಕಿ ಬರುವಳು ನೊರೆಯಂತೆ ಅವಳು...,

ಕಮಲದ ಮೊಗದೊಳು ಮಿಂಚುತಿಹ ನಿನ್ನ ಕಂಗಳು ., ಹೆಂಗಳೆಯರ ಕೈಯಲ್ಲಿ ಗಿಜಿಗಿಜಿ ಗಾಜಿನ ಬಳೆಗಳು...

ಬಲಗಾಲಿಟ್ಟು ಬರುವಳು ಮನೆಮನೆಗೆ ತಾಯಿ ಜನನಿ ... ಕನಕ, ಪೀತಂಭರದಿ ಶ್ರಿಂಗಾರಗೊಂಡಳು ಅಂಭಾ ಭವಾನಿ.., ನಿನ್ನಯ ದರುಶನ ಪಡೆದ ನಿನ್ನ ಭಕ್ತಿಯ ಮನ ಪಾವನಿ..

ಮುತ್ತೈದೆ ಹೆಣ್ಣಿಗೆ ಅರಸಿನ ಕುಂಕುಮ... ಭಾಗ್ಯದ ಲಕ್ಷ್ಮೀ ಬಲಗಾಲಿಟ್ಟು ಮನೆಗೆ ಬಾರಮ್ಮ.


 


ರಚನೆ 🖊️: ದೀಕ್ಷಾ ರೈ 



image