ದಕ್ಷಿಣ ಕನ್ನಡ

ಧರ್ಮಸ್ಥಳಕ್ಕೆ ನಟ ರಾಕಿಂಗ್‌ ಸ್ಟಾರ್ ಯಶ್ ಭೇಟಿ: ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ, ಧರ್ಮಾಧಿಕಾರಿಗಳ ಆಶೀರ್ವಾದ



ಬೆಳ್ತಂಗಡಿ: ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟ, ‘ರಾಕಿಂಗ್ ಸ್ಟಾರ್’ ಯಶ್ ಅವರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

​


ಶ್ರೀ ಕ್ಷೇತ್ರಕ್ಕೆ ಆಗಮಿಸಿದ ನಟ ಯಶ್ ಅವರನ್ನು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಅವರು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು. ಬಳಿಕ ಯಶ್ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.

​


ತಮ್ಮ ಮುಂಬರುವ ‘ಟಾಕ್ಸಿಕ್’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಯಶ್, ಸಿನಿಮಾ ಯಶಸ್ಸಿಗಾಗಿ ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನೆಚ್ಚಿನ ನಟನನ್ನು ಕಣ್ಣಾರೆ ಕಾಣಲು ಕ್ಷೇತ್ರದಲ್ಲಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಅಭಿಮಾನಿಗಳ ಹರ್ಷೋದ್ಗಾರ ಹಾಗೂ ಪ್ರೀತಿಗೆ ಸ್ಪಂದಿಸಿದ ಯಶ್, ಎಲ್ಲರಿಗೂ ಕೈಮುಗಿದು ಧನ್ಯವಾದ ತಿಳಿಸಿದರು.



image