ಉಡುಪಿ

ಉಡುಪಿ: ಭೀಕರ ರಸ್ತೆ ಅಪಘಾತಕ್ಕೆ ನಗರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಬಲಿ!

 


ಉಡುಪಿ: ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್‌ ಒಂದಕ್ಕೆ ಸಿಲುಕಿ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ, ಹಿರಿಯ ನಾಯಕಿ ಲಕ್ಷ್ಮೀ ಮಂಜುನಾಥ್ ಕೊಳ (58) ಅವರು ದಾರುಣವಾಗಿ ಸಸಿನೆಯಾದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

​ಅಪಘಾತ ನಡೆದಿದ್ದು ಹೇಗೆ?

ಶನಿವಾರ ಮಧ್ಯಾಹ್ನದ ವೇಳೆಗೆ ಉಡುಪಿಯ ನೈವೇದ್ಯ ಹೊಟೇಲ್ ಸನಿಹದ ಲಯನ್ಸ್ ಸರ್ಕಲ್ ಹತ್ತಿರ ಲಕ್ಷ್ಮೀ ಮಂಜುನಾಥ್ ಅವರು ರಸ್ತೆ ದಾಟುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಖಾಸಗಿ ಬಸ್‌ ನೇರವಾಗಿ ಅವರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಅವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

​ಜನಪ್ರಿಯ ಜನಪ್ರತಿನಿಧಿ:

ಮೃತ ಲಕ್ಷ್ಮೀ ಮಂಜುನಾಥ್ ಅವರು ಉಡುಪಿ ನಗರಸಭೆಯ ಉಪಾಧ್ಯಕ್ಷೆಯಾಗಿ ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ ಬಿಜೆಪಿ ಹಿರಿಯ ಮುಖಂಡ ಮಂಜು ಕೊಳ ಅವರ ಧರ್ಮಪತ್ನಿಯಾಗಿದ್ದು, ಸ್ಥಳೀಯವಾಗಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ಅವರ ಸಾವು ಕ್ಷೇತ್ರದಲ್ಲಿ ತೀವ್ರ ಶೋಕ ವಾತಾವರಣವನ್ನು ನಿರ್ಮಿಸಿದೆ.

​ಪೊಲೀಸ್ ತನಿಖೆ ಚುರುಕು:

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



image