ದಕ್ಷಿಣ ಕನ್ನಡ

ಮಂಗಳೂರು : ಅಖಂಡ ಕರ್ನಾಟಕಕ್ಕಾಗಿ ಶೀಘ್ರದಲ್ಲೇ ಹೊಸ ಪ್ರಾದೇಶಿಕ ಪಕ್ಷ ಲೋಕಾರ್ಪಣೆ: ಅಹಿಂಸಾ ಚೇತನ್ ಘೋಷಣೆ

 


ಮಂಗಳೂರು: ಸಂವಿಧಾನ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳೊಂದಿಗೆ ಅಖಂಡ ಕರ್ನಾಟಕದಲ್ಲಿ ಸಮಾನತೆಯ ಸಮಾಜ ನಿರ್ಮಿಸುವ ಗುರಿಯಿಟ್ಟುಕೊಂಡು, ಶೀಘ್ರದಲ್ಲೇ ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಅಸ್ತಿತ್ವಕ್ಕೆ ತರುವುದಾಗಿ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ತಿಳಿಸಿದ್ದಾರೆ.

​ಶನಿವಾರ ಮಂಗಳೂರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, "ಪ್ರಸ್ತುತ ರಾಜ್ಯದಲ್ಲಿರುವ ರಾಜಕೀಯ ಬೆಳವಣಿಗೆಗಳು ಹಾಗೂ ಸರಕಾರದ ಧೋರಣೆಗಳಿಗೆ ಜನಪರ ಆಡಳಿತವೇ ಸೂಕ್ತ ಪರಿಹಾರ. ಈ ನಿಟ್ಟಿನಲ್ಲಿ ವಿವಿಧ ಜನಪರ ಹೋರಾಟಗಾರರು ಮತ್ತು ಸಂಘಟನಾಕಾರರನ್ನು ಒಂದುಗೂಡಿಸಿ, ರಾಜ್ಯ ಮಟ್ಟದಲ್ಲಿ ಬಲವಾದ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸಲಾಗುವುದು" ಎಂದು ಹೇಳಿದರು.

​ಪಕ್ಷದ ಹೆಸರು ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದ್ದು, ಮುಂಬರುವ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಪಕ್ಷವನ್ನು ಅಧಿಕೃತವಾಗಿ ರಂಗಕ್ಕೆ ತರಲು ಸಿದ್ಧತೆಗಳು ನಡೆಯುತ್ತಿವೆ. ಈ ಹೊಸ ರಾಜಕೀಯ ಪಯಣದ ಸಂಘಟನೆಗಾಗಿ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.



image