ದಕ್ಷಿಣ ಕನ್ನಡ

ಬೆಳ್ತಂಗಡಿ/ಪಡಂಗಡಿ : ಕರ್ನಾಟಕ ಟಿವಿ ‘ಬೆಸ್ಟ್ ಎಂಎಲ್‌ಎ’ ಪ್ರಶಸ್ತಿ ಗೌರವ: ಶಾಸಕ ಹರೀಶ್ ಪೂಂಜಾಗೆ ಎಸ್‌ಕೆಪಿಎ ಬೆಳ್ತಂಗಡಿ ವಲಯದಿಂದ ಸನ್ಮಾನ


ಬೆಳ್ತಂಗಡಿ/ಪಡಂಗಡಿ: ಕರ್ನಾಟಕ ಟಿವಿ ನೀಡುವ ಪ್ರತಿಷ್ಠಿತ 'ಲೀಡರ್ ಅವಾರ್ಡ್ 2025'ರ 'ಬೆಸ್ಟ್ ಎಂಎಲ್‌ಎ' ಗೌರವಕ್ಕೆ ಭಾಜನರಾಗಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಸ್‌ಕೆಪಿಎ) ಬೆಳ್ತಂಗಡಿ ವಲಯದ ವತಿಯಿಂದ ಅಭಿನಂದಿಸಿ, ಗೌರವಾರ್ಪಣೆ ಸಲ್ಲಿಸಲಾಯಿತು.

​ಶಾಸಕರ ನಿವಾಸಕ್ಕೆ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ, ಕ್ಷೇತ್ರದ ಅಭಿವೃದ್ಧಿ ಹಾಗೂ ಜನಪರ ಸೇವೆಯನ್ನು ಗುರುತಿಸಿ ಲಭಿಸಿರುವ ಈ ಪ್ರಶಸ್ತಿಗಾಗಿ ಶಾಸಕರಿಗೆ ಶುಭ ಹಾರೈಸಿದರು.

​ಈ ಸಂದರ್ಭದಲ್ಲಿ ಎಸ್‌ಕೆಪಿಎ ಬೆಳ್ತಂಗಡಿ ವಲಯದ ಗೌರವಾಧ್ಯಕ್ಷ ವಿಲ್ಸನ್ ಗೋನ್ಸಾಲಿಸ್, ಅಧ್ಯಕ್ಷ ರವಿ ಪೂಜಾರಿ ನಾರಾವಿ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ ಹಾಗೂ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ. ಸುವರ್ಣ ಉಪಸ್ಥಿತರಿದ್ದರು.

​ಅಲ್ಲದೆ, ವಲಯದ ಉಪಾಧ್ಯಕ್ಷ ಉಮೇಶ್ ಕುಲಾಲ್ ಗುರುವಾಯನಕೆರೆ, ಜೊತೆ ಕಾರ್ಯದರ್ಶಿ ಗಣೇಶ್ ಹೆಗ್ಡೆ ನಾರಾವಿ, ಕೋಶಾಧಿಕಾರಿ ಸುಜಿತ್ ರೈ ಪದ್ಮುಂಜ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಬಿ. ಕೌಡಂಗೆ, ವಲಯ ಸಾಂಸ್ಕೃತಿಕ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ನೇಸರ, ಕ್ರೀಡಾ ಕಾರ್ಯದರ್ಶಿ ಸಂದೀಪ್ ಪೊಳಲಿ ಸೇರಿದಂತೆ ವಲಯದ ಗೌರವ ಸಲಹೆಗಾರರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.



image