ಬೆಳ್ತಂಗಡಿ: ಪಡಂಗಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ 'ಸಮೃದ್ಧಿ ಕಾಂಪ್ಲೆಕ್ಸ್'ನಲ್ಲಿ ಗ್ರಾಹಕರ ಸೇವೆಗಾಗಿ ನೂತನ 'ಎಸ್ ಮಾರ್ಟ್' ಸೂಪರ್ ಬಜಾರ್ ಹಾಗೂ ಆಧುನಿಕ ಭದ್ರತಾ ಕೊಠಡಿಯನ್ನು ಶನಿವಾರ ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಯಿತು.
ಸ್ಥಳೀಯ ಶಾಸಕ ಹರೀಶ್ ಪೂಂಜ ಅವರು ದೀಪ ಬೆಳಗಿಸಿ 'ಎಸ್ ಮಾರ್ಟ್' ಅನ್ನು ಉದ್ಘಾಟಿಸಿ, ಸಹಕಾರ ಸಂಘದ ಈ ಹೊಸ ಹೆಜ್ಜೆ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಸೇವೆ ನೀಡಲು ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ, ಸಂಘದ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ನೂತನ ಭದ್ರತಾ ಕೊಠಡಿಯನ್ನು ಪಡಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಡಂಗಡಿ ಸಹಕಾರ ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡೀಸ್, ಉಪಾಧ್ಯಕ್ಷ ನರೇಂದ್ರ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಕೇಶಿನಿ, ನಿರ್ದೇಶಕರುಗಳಾದ ನಾರಾಯಣ ಮೂಲ್ಯ, ಸಂತೋಷ್ ಶೆಟ್ಟಿ, ರವಿ ಕುಮಾರ್ ಕೆ.ವೈ., ರಾಮು, ಪದ್ಮನಾಭ ನಾಯ್ಕ ಸಿಸಿ, ಕೃಷ್ಣಪ್ಪ ಪೂಜಾರಿ, ಉಮೇಶ್, ಉಷಾ, ಸುನಂದ ಹಾಗೂ ನವೀನ್ ಭಾಗವಹಿಸಿದ್ದರು.
ಉಳಿದಂತೆ ವಲಯ ಮೇಲ್ವಿಚಾರಕರಾದ ಸುದರ್ಶನ್, ಸಂಘದ ಲೆಕ್ಕಿಗ ಸುಜಯ ಸೇರಿದಂತೆ ಸ್ಥಳೀಯ ಗಣ್ಯರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

