ಬೆಳ್ತಂಗಡಿ: ತಾಲೂಕು ಪಂಚಾಯತ್‌ನ ಸಹಾಯಕ ನಿರ್ದೇಶಕಿ (ವಿಬಿ-ಜಿ ರಾಮ್ ಜಿ) ಹುದ್ದೆಗೆ ಮುಂಡಾಜೆ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗಾಯತ್ರಿ ಪಿ. ಅವರು ಪ್ರಭಾರ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದೆ ಈ ಹುದ್ದೆಯಲ್ಲಿದ್ದ ಸಫನಾ ಅವರು ಮೂಲ್ಕಿ ತಾಲೂಕಿಗೆ ವರ್ಗಾವಣೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತೆರವಾದ ಜವಾಬ್ದಾರಿಯನ್ನು ಅವರು ನೂತನ ಪ್ರಭಾರ ಅಧಿಕಾರಿ ಗಾಯತ್ರಿ ಪಿ. ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

