ಪ್ರೀತಿಯ ಅಂಬಾರಿಯಲ್ಲಿ ತೇಲುವಾಗ ಹದಿನೆಂಟರ ಹರೆಯ, ಜೀವನದ ಪಾಠವನ್ನು ಅರಿತಾಗ ವಯೋಮಿತಿಗಳಿಲ್ಲದ ಸಮಯ...
ಹೊಲದಲ್ಲಿ ಸಿಕ್ಕಿಹುದು ದವಸ ಧಾನ್ಯ... ಕಾಲಚಕ್ರದ ನಡುವೆ ಎಲ್ಲವೂ ಶೂನ್ಯ... ಭರತಖಂಡದಲ್ಲಿ ಹುಟ್ಟಿದ ನಾವೇ ಧನ್ಯ...
ಹೊಲದಲ್ಲಿ ಬಿತ್ತಿದ ಬೆಳೆ, ವಿಷಪೂರಿತವಾದ ಇಳೆ.... ಋತುವಿಗನುಸಾರವಾಗಿ ಸುರಿಯದ ಮಳೆ, ತೆನೆಯಿಲ್ಲದೆ ಪೈರಿನ ಕಳೆ...
ಒಲಿದ ಜೀವ ಬರಡು ಆಗಿ ಭುವಿ ಸೇರಿದೆ... ತಿನ್ನೋ ಅನ್ನ ರುಚಿ ಇಲ್ಲದೆ ಮಣ್ಣ ಪಾಲಾಗಿದೆ....
ಜನನದಲಿ ಬರುವೆವು ಬೆತ್ತಲೆಯಾಗಿ ಧರೆಗೆ, ಮರಣದಲಿ ಸೇರುವೆವು ಭೂತಾಯಿಯ ಮಡಿಲಿಗೆ... ಜನನಮರಣದ ನಡುವೆ ಹೋರಾಟ ಏತಕೆ ?
✍️ರಚನೆ: ದೀಕ್ಷಿತ ರೈ

