ಬೆಳ್ತಂಗಡಿ: 'ಕರ್ನಾಟಕ ಟಿವಿ' ಸಂಸ್ಥೆ ಆಯೋಜಿಸಿದ್ದ ಪ್ರತಿಷ್ಠಿತ 'ಲೀಡರ್ಸ್ ಅವಾರ್ಡ್ 2025' ಕಾರ್ಯಕ್ರಮದಲ್ಲಿ, ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ 'ಉತ್ತಮ ಶಾಸಕ' ಪ್ರಶಸ್ತಿಗೆ ಭಾಜನರಾಗಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಅಭಿನಂದನೀಯ ಸಾಧನೆಯ ಹಿನ್ನೆಲೆಯಲ್ಲಿ ಪುದುವೆಟ್ಟು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶಾಸಕರನ್ನು ಗೌರವಿಸಲಾಯಿತು.
ಆಗಸ್ಟ್ 28ರಂದು ಶಾಸಕರ ನಿವಾಸ 'ಮಿಥಿಲಾ'ದಲ್ಲಿ ಭೇಟಿಯಾದ ಶಕ್ತಿ ಕೇಂದ್ರದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಹರೀಶ್ ಪೂಂಜ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು. ತಾಲೂಕಿನ ಜನಪ್ರಿಯ ನಾಯಕನಾಗಿ, ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮೆಚ್ಚುಗೆ ಗಳಿಸಿರುವ ಶಾಸಕರಿಗೆ ಲಭಿಸಿರುವ ಈ ಪ್ರಶಸ್ತಿ ಬೆಳ್ತಂಗಡಿ ಕ್ಷೇತ್ರಕ್ಕೆ ಸಂದ ಗೌರವ ಎಂದು ಈ ಸಂದರ್ಭದಲ್ಲಿ ಪ್ರಮುಖರು ಸಂತಸ ವ್ಯಕ್ತಪಡಿಸಿದರು.
ಪ್ರಮುಖ ನಾಯಕರ ಉಪಸ್ಥಿತಿ:
ಈ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶವಂತ್ ಗೌಡ ಡೆಚ್ಚಾರ್, ಪುದುವೆಟ್ಟು ಶಕ್ತಿ ಕೇಂದ್ರ ಪ್ರಮುಖ್ ಪೂರ್ಣಾಕ್ಷ ಬಾಯಿತ್ಯಾರು ಹಾಗೂ ಪ್ರಮುಖರಾದ ಅಜಿತ್ ಕುಮಾರ್ ಜೈನ್, ಪ್ರಸನ್ನ ಹೆಬ್ಬಾರ್, ಭಾಸ್ಕರ ಅಡ್ಯ, ದಿವಾಕರ ಗೌಡ ಮುಚ್ಚಾರು, ಸೋಯ್ ವರ್ಗಿಸ್ ಪುದುವೆಟ್ಟು, ದಾಮೋದರ ಮುಜಾರ್ದಡ್ಡು, ಚಂದ್ರಹಾಸ ಮುಚ್ಚಾರು, ನಿತ್ಯಾನಂದ ಗೌಡ, ಶಶಿಧರ ಪೂಜಾರಿ ಗುಂಪಕಲ್ಲು ಉಪಸ್ಥಿತರಿದ್ದರು.
ಹಾಗೆಯೇ ಸುರೇಶ್ ಕೇರ್ಯ, ಚೇತನ್ ಮುಚ್ಚಾರು, ಧನ್ಯ ಕುಮಾರ್ ಭಂಡಾರಿ ಸೇರಿದಂತೆ ಹಿರಿಯ ಮುಖಂಡರಾದ ರಮೇಶ್ ರಾವ್ ಮುಳಿಮಜಲು, ಲಿಂಗಪ್ಪ ಸಾಲಿಯಾನ್, ಹೊನ್ನಪ್ಪ ಗೌಡ ಮುಚ್ಚಾರು, ಕೃಷ್ಣಪ್ಪ ಪೂಜಾರಿ, ನಾರಾಯಣ ಪೂಜಾರಿ, ಕುಕ್ಕಪ್ಪ ಗೌಡ ಮುಚ್ಚಾರು ಮತ್ತು ರಾಘವ ಕಾರ್ಪಾಜೆ ಹಾಜರಿದ್ದರು.
ಕಾರ್ಯಕ್ರಮದಲ್ಲಿ ರೇಣುಕಾ, ಅಣ್ಣು ಗೌಡ ಬಡಕೊಟ್ಯ, ಅಕ್ಷತ್ ಗೌಡ, ಭರತ್ ಗೌಡ, ಸಜು ಖಂಡಿಗ, ರಂಗನಾಥ್, ಬಾಲಣ್ಣ ಗೌಡ, ಶೇಖರ್ ಗೌಡ, ಶೇಖರ್ ಪೂಜಾರಿ, ಟೋಕ್ಕಯ್ಯ ಗೌಡ, ಮೋಹನ್, ವಸಂತ ಪೂಜಾರಿ, ಒಬಯ್ಯ ಮುಜಾರ್ದಡ್ದು, ಸತೀಶ ಮುಚ್ಚಾರು, ವಿಕ್ರಮ್, ಪ್ರಮೋದ್, ಭರತ್ ಮುಚ್ಚಾರು ಸೇರಿದಂತೆ ಬಿಜೆಪಿ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಶಾಸಕರಿಗೆ ಶುಭ ಹಾರೈಸಿದರು.
