ಬೆಳ್ತಂಗಡಿ: ಪವಿತ್ರ ರಕ್ಷಾಬಂಧನ ಹಬ್ಬದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮಹಿಳಾ ಮೋರ್ಚಾ ಬೆಳ್ತಂಗಡಿ ಘಟಕದ ವತಿಯಿಂದ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಶಾಸಕ ಹರೀಶ್ ಪೂಂಜಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸ್ವಚ್ಛತಾ ಸಿಬ್ಬಂದಿಗೆ ರಾಖಿ ಕಟ್ಟಿ, ಸಿಹಿ ಹಂಚಿ ರಕ್ಷಾಬಂಧನದ ಶುಭಾಶಯ ಕೋರಲಾಯಿತು.
ಕುವೆಟ್ಟು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಪುಂಜಾಲಕಟ್ಟೆ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ವರ್ಗಕ್ಕೆ ಬಿಜೆಪಿ ಮಹಿಳಾ ಮೋರ್ಚಾ ನಾಯಕಿಯರು ರಾಖಿ ಕಟ್ಟಿ ಶುಭ ಹಾರೈಸಿದರು. ಇದೇ ವೇಳೆ ಸಮಾಜದ ಆರೋಗ್ಯ ಕಾಪಾಡುವಲ್ಲಿ ಅಹೋರಾತ್ರಿ ಶ್ರಮಿಸುವ ಮಾಲಾಡಿ ಮತ್ತು ಮಡಂತ್ಯಾರು ಗ್ರಾಮ ಪಂಚಾಯತ್‌ನ ಸ್ವಚ್ಛತಾ ಸಿಬ್ಬಂದಿಗೂ ರಕ್ಷಾಬಂಧನ ಕಟ್ಟಿ, ಅವರ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ತುಳಸಿ ಉಮೇಶ್ ಹಾಗೂ ಪೂರ್ಣಿಮಾ ಜಯಂತ್, ಉಪಾಧ್ಯಕ್ಷೆ ಶಾರದಾ ಚಾರ್ಮಾಡಿ, ಕಾರ್ಯದರ್ಶಿ ಶಶಿಕಲಾ ದೇವಪ್ಪ ಗೌಡ, ಕೋಶಾಧಿಕಾರಿ ಸಂಗೀತ ಶೆಟ್ಟಿ ಭಾಗವಹಿಸಿದ್ದರು.
ಅಲ್ಲದೆ, ಮಂಜುಳಾ ನಡ, ಸವಿತಾ ಕುಲಾಲ್, ಮಂಜುಳಾ ಅತ್ತಾಜೆ, ಜಿಲ್ಲಾ ಎಸ್.ಸಿ. ಮೋರ್ಚಾ ಸದಸ್ಯೆ ಚಂದ್ರಕಲಾ, ಸದಸ್ಯೆ ಜಯಂತಿ, ಮಡಂತ್ಯಾರು ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಪ್ರಭಾ ಹಾಗೂ ಕುಕ್ಕಳ ಬೂತ್ ಕಾರ್ಯದರ್ಶಿ ರಾಜೇಶ್ವರಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.



