ದಕ್ಷಿಣ ಕನ್ನಡ

ಬೆಳ್ತಂಗಡಿ : ಕಸ್ತೂರಿ ರಂಗನ್ ವರದಿ ವಿರುದ್ಧ ಹೋರಾಟಕ್ಕೆ ಕರೆ: ನಾಲ್ಕೂರಿನಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಮಾಲೋಚನಾ ಸಭೆ

 


ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ಹಾಗೂ ಕೇಂದ್ರ ಸರ್ಕಾರದ 7ನೇ ಕರಡು ಅಧಿಸೂಚನೆಯ ಪರಿಸರ ಸೂಕ್ಷ್ಮ ವಲಯ (ESA) ಯೋಜನೆಯಿಂದ ಮಲೆನಾಡಿನ ಜನರಿಗೆ ಎದುರಾಗಲಿರುವ ಸಂಕಷ್ಟಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಮುಂದಿನ ಹೋರಾಟದ ಹಾದಿ ರೂಪಿಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆ ನಾಲ್ಕೂರು ಸಮಿತಿಯ ಆಶ್ರಯದಲ್ಲಿ ಸಮಾಲೋಚನಾ ಸಭೆ ನಡೆಯಿತು.

​ಸಭೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ ಅವರು, "ಪರಿಸರ ಸೂಕ್ಷ್ಮ ವಲಯ ಜಾರಿಯಾದಲ್ಲಿ ಸ್ಥಳೀಯರ ಹಾಗೂ ರೈತರ ದಿನನಿತ್ಯದ ಬದುಕಿನ ಮೇಲೆ ಉಂಟಾಗುವ ಗಂಭೀರ ಪರಿಣಾಮಗಳ ಕುರಿತು ಸುದೀರ್ಘವಾಗಿ ವಿವರಿಸಿದರು. ಈ ಯೋಜನೆಯಿಂದಾಗುವ ಅನ್ಯಾಯವನ್ನು ತಡೆಯಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ವೈಯಕ್ತಿಕವಾಗಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಮೂಲಕ ತೀವ್ರ ಆಕ್ಷೇಪಣೆ ಪತ್ರಗಳನ್ನು ಸಲ್ಲಿಸುವುದು ಅತ್ಯಗತ್ಯ," ಎಂದು ಕರೆ ನೀಡಿದರು.


ಆಗಸ್ಟ್ 20ಕ್ಕೆ ಸುಬ್ರಹ್ಮಣ್ಯದಲ್ಲಿ ಬೃಹತ್ ಸಭೆ

​ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ, ಬರುವ ಆಗಸ್ಟ್ 20 ರಂದು ಸುಬ್ರಹ್ಮಣ್ಯದಲ್ಲಿ ಸಮಗ್ರ ಹೋರಾಟದ ರೂಪುರೇಷೆ ಸಭೆಯನ್ನು ಆಯೋಜಿಸಲು ಈ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.


ಈ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಪ್ರಮುಖರಾದ ದಾಮೋದರ್ ಗುಂಡ್ಯ, ಮಿಲನ್ ಬಾಳಿಕಳ, ಮಾಧವ ಶಿರ್ಲಾಲು, ಕರುಣಾಕರ ಹೆಗ್ಡೆ, ದಿನೇಶ್ P.K., ವಿಜಯ ಕುಮಾರ್ ಜೈನ್ ಸೇರಿದಂತೆ ಮಲೆನಾಡು ಭಾಗದ ಹಲವು ರೈತ ಮುಖಂಡರು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ತಮ್ಮ ಸಲಹೆ-ಸೂಚನೆಗಳನ್ನು ಹಂಚಿಕೊಂಡರು.



image