ದಕ್ಷಿಣ ಕನ್ನಡ

​ಬೆಳ್ತಂಗಡಿ: ಹೊಸಂಗಡಿಯಲ್ಲಿ ಅಸ್ವಸ್ಥರ ಮನೆಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ; ಕುಟುಂಬಸ್ಥರಿಗೆ ಧೈರ್ಯ ತುಂಬಿದ ಶಾಸಕರು



ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ ತಾಲೂಕಿನ ಹೊಸಂಗಡಿ ಗ್ರಾಮದ ನಿವಾಸಿಗಳ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ರವಿವಾರ ಭೇಟಿ ನೀಡಿ ಸಾಂತ್ವನ ಹೇಳಿದರು.

​ಹೊಸಂಗಡಿಯ ಅರ್ಕಾಡಿ ನಿವಾಸಿ ಗುಲಾಬಿ ಪೂಜಾರ್ತಿ ಹಾಗೂ ಅಂಕರೋಡಿ ನಿವಾಸಿ ಹರೀಶ್ ಕುಲಾಲ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಅವರ ನಿವಾಸಕ್ಕೆ ತೆರಳಿದ ಶಾಸಕರು, ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಅಲ್ಲದೆ, ಧೈರ್ಯಗೆಡದೆ ಚಿಕಿತ್ಸೆ ಮುಂದುವರಿಸುವಂತೆ ಕುಟುಂಬದ ಸದಸ್ಯರಿಗೆ ಆಸರೆಯ ಭರವಸೆ ನೀಡಿದರು.

​


ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಜಗದೀಶ್ ಹೆಗ್ಡೆ, ಕರುಣಾಕರ ಪೂಜಾರಿ, ಶಂಕರ ಪೂಜಾರಿ, ಹರೀಶ್, ಸತೀಶ್ ಶೆಟ್ಟಿ ಹಾಗೂ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.



image